ಬೆಂಗಳೂರು: ನಗರದ ಹೊರವಲಯ ಬೆಳ್ಳಂದೂರು ವಾರ್ಡ್ಗೆ ಬಿಬಿಎಂಪಿ ಕೋವಿಡ್ ಅಲರ್ಟ್ ನೀಡಿದೆ. ಬೆಳ್ಳಂದೂರಿನ ಅಂಬಲೀಪುರದ ಎಸ್.ಜೆ.ಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಫೆ.15 ರಿಂದ 22 ರವರೆಗೆ, 10 ಕೋವಿಡ್ ಪಾಸಿಟಿವ್ ಕೇಸ್ ಕಂಡುಬಂದಿದೆ.
ಅಪಾರ್ಟ್ಮೆಂಟ್ನಲ್ಲಿ 10 ಕೋವಿಡ್ ಪ್ರಕರಣ: ನಾಳೆ ಬರಲಿದೆ 500 ಜನರ ರಿಪೋರ್ಟ್ - ಅಪಾರ್ಟ್ಮೆಂಟ್ನಲ್ಲಿ ಕೋವಿಡ್
ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಮಹದೇವಪುರ ವಲಯದ ಆರೋಗ್ಯಾಧಿಕಾರಿಗಳು 9 ಮೊಬೈಲ್ ತಂಡಗಳನ್ನು ನೇಮಿಸಿ, 500 ಜನರ ಆರ್ಟಿಪಿಸಿಆರ್ ಸ್ಯಾಂಪಲ್ ಪರೀಕ್ಷೆಗೆ ಕಳಿಸಲಾಗಿದೆ. ನಾಳೆ ಇವರ ಕೋವಿಡ್ ರಿಪೋರ್ಟ್ ಸಿಗಲಿದೆ. ಸದ್ಯ ಅಪಾರ್ಟ್ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದೆ. ನಾಲ್ಕು ಜನ ವೈದ್ಯರನ್ನು ನೇಮಿಸಲಾಗಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಎಸ್ಜೆಆರ್, ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ 9 ಬ್ಲಾಕ್ಗಳಲ್ಲಿ 1500 ಮಂದಿ ವಾಸ ಮಾಡುತ್ತಿದ್ದು, ಈ ಪೈಕಿ ಆರು ಬ್ಲಾಕ್ಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿದೆ. ಈ ಆರು ಬ್ಲಾಕ್ಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಮಹದೇವಪುರ ವಲಯದ ಆರೋಗ್ಯಾಧಿಕಾರಿಗಳು 9 ಮೊಬೈಲ್ ತಂಡಗಳನ್ನು ನೇಮಿಸಿ, 500 ಜನರ ಆರ್ಟಿಪಿಸಿಆರ್ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ನಾಳೆ ಇವರ ಕೋವಿಡ್ ರಿಪೋರ್ಟ್ ಸಿಗಲಿದೆ. ಸದ್ಯ ಅಪಾರ್ಟ್ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದೆ. ನಾಲ್ಕು ಜನ ವೈದ್ಯರನ್ನು ನೇಮಿಸಲಾಗಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.