ಕರ್ನಾಟಕ

karnataka

ETV Bharat / city

ರಫ್ತುದಾರರಿಗೆ ಅನುಕೂಲವಾಗಲು ಬೇಲಿಕೇರಿ ಬಂದರಿಗೆ ಸದ್ಯದಲ್ಲಿಯೇ ಚಾಲನೆ: ಸಚಿವ ಜಗದೀಶ್ ಶೆಟ್ಟರ್ - FKCCI Export Promotion Awards Ceremony

ಈಗಾಗಲೇ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನಲ್ಲಿ ಏಕಸ್ ಸಂಸ್ಥೆಯು ಬೊಂಬೆಗಳ ಕ್ಲಸ್ಟರ್ ಸುಮಾರು 600 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಶ್ರೇಣಿಯಲ್ಲಿ ಕರ್ನಾಟಕವು 17ನೇ ಶ್ರೇಣಿ ಪಡೆದಿರುವ ಬಗ್ಗೆ ಉದ್ದಿಮೆಗಳು ಆತಂಕಪಡಬೇಕಾಗಿಲ್ಲ ಎಂದು ಸಚಿವರು ತಿಳಿಸಿದರು.

Belikeri Port will run for facilitate exporters Jagadish shetter said
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

By

Published : Sep 18, 2020, 9:23 PM IST

ಬೆಂಗಳೂರು: ರಫ್ತುದಾರರಿಗೆ ಅನುಕೂಲವಾಗಲು ಬೇಲಿಕೇರಿ ಬಂದರಿಗೆ ಸದ್ಯದಲ್ಲಿಯೇ ಚಾಲನೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಎಫ್​ಕೆಸಿಸಿಐ 15ನೇ ಆವೃತ್ತಿಯ ರಫ್ತು ಉತ್ತೇಜನಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸರ್.ಎಂ.ವಿ. ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶೆಟ್ಟರ್​​, ಇಡೀ ದೇಶದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕ ಇಂಡಸ್ಟ್ರೀಸ್ ಫೆಸಿಲಿಟೇಷನ್ ಕಾಯಿದೆಗೆ ತಿದ್ದುಪಡಿ ತಂದಿರುವ ಏಕೈಕ ರಾಜ್ಯ ಕರ್ನಾಟಕ. ಅಲ್ಲದೆ ಪ್ರತಿ ಜಿಲ್ಲೆಗಳಿಂದ, ಟೈರ್ 2, 3 ನಗರಗಳಿಂದ ರಫ್ತನ್ನು ಹೆಚ್ಚಿಸಲು ಎಫ್.ಕೆ.ಸಿ.ಸಿ.ಐ. ಸಹಯೋಗದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ರಫ್ತು ಅಭಿವೃದ್ಧಿಗೆ ಸೃಷ್ಠಿಸಿರುವ ವಿಟಿಪಿಸಿ ಸಂಸ್ಥೆಯ ಬಲವರ್ಧನೆ ಮಾಡುವುದಾಗಿ ಸಹ ಭರವಸೆ ನೀಡಿ, ಸಂಸ್ಥೆಗೆ ಎಂಡಿಎ ಯೋಜನೆಯಡಿ ಹೆಚ್ಚಿನ ಅನುದಾನ ಒದಗಿಸುವುದಾಗಿ ತಿಳಿಸಿದರು. ಒಂದು ಜಿಲ್ಲೆ ಒಂದು ವಸ್ತು ಯೋಜನೆಯನ್ನು ರೂಪಿಸಿ, ಸ್ಥಳೀಯ ಉತ್ಪನ್ನಗಳಿಗೆ ರಫ್ತು ಕೈಗೊಳ್ಳುವ ಅಗತ್ಯವಿರುವ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಎಫ್​ಕೆಸಿಸಿಐ 15ನೇ ಆವೃತ್ತಿಯ ರಫ್ತು ಉತ್ತೇಜನಾ ಪ್ರಶಸ್ತಿ ಪ್ರಧಾನ ಸಮಾರಂಭ

ಈಗಾಗಲೇ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನಲ್ಲಿ ಏಕಸ್ ಸಂಸ್ಥೆಯು ಬೊಂಬೆಗಳ ಕ್ಲಸ್ಟರ್ ಸುಮಾರು 600 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಶ್ರೇಣಿಯಲ್ಲಿ ಕರ್ನಾಟಕವು 17ನೇ ಶ್ರೇಣಿ ಪಡೆದಿರುವ ಬಗ್ಗೆ ಉದ್ದಿಮೆಗಳು ಆತಂಕಪಡಬೇಕಾಗಿಲ್ಲ ಎಂದರು.

ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರ ಮಾತನ್ನು ಸಮರ್ಥಿಸುತ್ತಾ, ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ರಾಜ್ಯವು ತೆಗೆದುಕೊಂಡಿರುವ ಸರಳೀಕರಣದ ಕ್ರಮಗಳು ಜಾರಿಗೆ ಬಂದಿರಲಿಲ್ಲ, ರಾಜಕೀಯ ಅಸ್ಥಿರತೆ ಇತ್ತು. ಆದರೆ ಈಗ ತೆಗೆದುಕೊಂಡಿರುವ ಕ್ರಮಗಳ ಆಧಾರದಲ್ಲಿ ಮುಂದಿನ ಸಮೀಕ್ಷೆಯಲ್ಲಿ ಮೊದಲ ಐದರ ಶ್ರೇಣಿಯನ್ನು ಪಡೆಯುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಎಫ್.ಕೆ.ಸಿ.ಸಿ.ಐ.ನ ಅಧ್ಯಕ್ಷ ಸಿ. ಆರ್. ಜನಾರ್ಧನರವರು ರಾಜ್ಯದ ರಫ್ತು ಚಿತ್ರಣ, ಸಮಾರಂಭದ ಉದ್ದೇಶ, ರಫ್ತಿಗೆ ಇರುವ ಅವಕಾಶಗಳು ಹಾಗೂ ರಾಜ್ಯದಿಂದ ರಫ್ತು ವೃದ್ಧಿಸಲು ಸರ್ಕಾರವು ತೆಗೆದುಕೊಳ್ಳಬೇಕಾದ ಕೆಲವು ಮುಖ್ಯ ಅಂಶಗಳನ್ನು ಸಚಿವರ ಗಮನಕ್ಕೆ ತಂದರು. ಮುಖ್ಯವಾಗಿ ಹಾಸನದಲ್ಲಿ ಡ್ರೈ ಪೋರ್ಟ್ ಸ್ಥಾಪನೆ, ಜಿಲ್ಲಾವಾರು ರಫ್ತು ಚಟುವಟಿಕೆ ಹೆಚ್ಚಿಸುವುದು, ವಿಟಿಪಿಸಿ ಸಂಸ್ಥೆಯ ಬಲವರ್ಧನೆ, ಮೂಲಭೂತ ಸೌಕರ್ಯಗಳ ವಿಚಾರಗಳನ್ನು ಒಳಗೊಂಡಿದ್ದವು.

ರಫ್ತು ಉತ್ತೇಜನಾ ಸಮಿತಿಯ ಚೇರಮನ್​​ ಬಿ.ಪಿ.ಶಶಿಧರ್ ಅವರು ಈ ಕಾರ್ಯಕ್ರಮದ ಧ್ಯೇಯೋದ್ದೇಶಗಳು, ನಡೆದು ಬಂದ ಹಾದಿ, ಆಯ್ಕೆ ಪ್ರಕ್ರಿಯೆ ವಿಚಾರಗಳ ಬಗ್ಗೆ ಸಮಾರಂಭದಲ್ಲಿ ತಿಳಿಸಿದರು. ಪ್ರಶಸ್ತಿ ಸಮಾರಂಭದ ವೈಶಿಷ್ಠ್ಯತೆ, ಪ್ರಶಸ್ತಿ ವಿಜೇತರ ಸ್ಮರಣ ಸಂಚಿಕೆ ಅನಾವರಣಗೊಳಿಸಲಾಯಿತು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವಿಧ ವರ್ಗಗಳ 35 ರಫ್ತುದಾರರನ್ನು ಸನ್ಮಾನಿಸಿ, ಪ್ರಶಸ್ತಿಗಳನ್ನು ಮಾನ್ಯ ಸಚಿವರು ಮತ್ತು ಎಫ್.ಕೆ.ಸಿ.ಸಿ.ಐ. ಪದಾಧಿಕಾರಿಗಳು ವಿತರಿಸಿದರು. ಸಮಾರಂಭದ ವಂದನಾರ್ಪಣೆಯನ್ನು ಮಹಾಸಂಸ್ಥೆಯ ಚುನಾಯಿತ ಹಿರಿಯ ಉಪಾಧ್ಯಕ್ಷ ಸಿಎ ಐ.ಎಸ್.ಪ್ರಸಾದ್ ಅವರು ನೆರವೇರಿಸಿದರು. ಪ್ರಶಸ್ತಿಗಳನ್ನು ಎಫ್.ಕೆ.ಸಿ.ಸಿ.ಐ. ನೇಮಿಸಿದ್ದ ಜೂರಿ ಸಮಿತಿ ಸದಸ್ಯರು ಸಹ ಹಾಜರಿದ್ದು, ಅವರನ್ನು ಗೌರವಿಸಲಾಯಿತು.

ABOUT THE AUTHOR

...view details