ಬೆಂಗಳೂರು: ಕೈಗಾರಿಕೆಗಳ ರಾಸಾಯನಿಕ ಯುಕ್ತ ನೀರು ಕೃಷಿ ಭೂಮಿಗೆ ಸೇರುವುದರಿಂದ ಮತ್ತು ಕಡಿಮೆ ಬೆಲೆಯ ಗೊಬ್ಬರ ಬಳಕೆಯಿಂದ ಕೃಷಿ ಭೂಮಿ ಮಲಿನವಾಗುವುದಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ತರಕಾರಿ ಬೆಳೆಗಳಲ್ಲಿ ಸಾಲ್ಮೊನೆಲ್ಲಾನಂತಹ ವಿಷಕಾರಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದೆ ಎಂಬುದು ಸಾಬೀತಾಗಿದೆ.
ಈ ಸಮಸ್ಯೆಗೆ ಪರಿಹಾರ ಪತ್ತೆಹಚ್ಚಲು, ಐಐಎಸ್ಸಿ ಹಾಗೂ ಜಿಕೆವಿಕೆಯ ಸಂಶೋಧಕರು ಹೊಸದೊಂದು ತಂತ್ರವನ್ನು ರೂಪಿಸಿದ್ದಾರೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಗಟ್ಟಲು ಬೀಟ್ರೂಟ್ ಬೆಳೆದರೆ ಇತರೆ ತರಕಾರಿ ಹಾಗೂ ಬೀಟ್ರೂಟ್ ಸೇವಿಸಲು ಯೋಗ್ಯವಿರುತ್ತದೆ ಎಂದು ಸಂಶೋಧಕರ ತಂಡ ತಿಳಿಸಿದೆ.
ಮೈಕ್ರೊಬಯಾಲಜಿ ಹಾಗೂ ಸೆಲ್ ಬಯೋಲಜಿ (MCB) ವಿಭಾಗದ ಸಂಶೋಧಕರಾದ ದೀಪ್ಶಿಕಾ ಚಕ್ರವರ್ತಿ ಹಾಗೂ ಅವರ ತಂಡದ ಸಂಶೋಧನೆಯ ಪ್ರಕಾರ, ಬೀಟ್ರೂಟ್ ಗಿಡ ಸೂಕ್ಷ್ಮಜೀವಿಗಳನ್ನ ಬಿಡುಗಡೆ ಮಾಡುತ್ತದೆ. ಇದರಿಂದ ಸಾಲ್ಮೊನ್ನೆಲ್ಲಾ ಬ್ಯಾಕ್ಟೀರಿಯಾವನ್ನು ತಡೆಗಟ್ಟುತ್ತದೆ.