ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಬಂದೋಬಸ್ತ್​ನಲ್ಲಿದ್ದ ಪೊಲೀಸರ ಮೇಲೆ ಹೆಜ್ಜೇನು ದಾಳಿ: ICUನಲ್ಲಿ ಇಬ್ಬರಿಗೆ ಚಿಕಿತ್ಸೆ

ಫ್ರೀಡಂ ಪಾರ್ಕ್​ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹೆಜ್ಜೇನು ದಾಳಿ ಮಾಡಿವೆ. ಪರಿಣಾಮ ಕೆಲ ಪೊಲೀಸರು ಅಸ್ವಸ್ಥಗೊಂಡಿದ್ದಾರೆ.

By

Published : Mar 10, 2022, 12:50 PM IST

Updated : Mar 10, 2022, 1:05 PM IST

ಹೆಜ್ಜೇನು ದಾಳಿ
ಹೆಜ್ಜೇನು ದಾಳಿ

ಬೆಂಗಳೂರು: ನಗರದ ಫ್ರೀಡಂಪಾರ್ಕ್​ನಲ್ಲಿ ಬಂದೋಬಸ್ತ್​​ನಲ್ಲಿದ್ದ ಪೊಲೀಸರ ಮೇಲೆ ಹೆಜ್ಜೇನು ದಾಳಿ ಮಾಡಿವೆ. ಪರಿಣಾಮ ಇಬ್ಬರು ಸಿಬ್ಬಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಂದು ಬೆಳಗ್ಗೆ ಬಂದೋಬಸ್ತ್​ನಲ್ಲಿದ್ದ ಪೊಲೀಸರ ಮೇಲೆ ಜೇನುಹುಳುಗಳು ದಾಳಿ ಮಾಡಿವೆ.

ಇನ್ಸ್​​​ಪೆಕ್ಟರ್​​, ಮಹಿಳಾ ಸಿಬ್ಬಂದಿ ಸೇರಿದಂತೆ 10 ಜನಕ್ಕೆ ಜೇನು ಹುಳುಗಳು ಕಚ್ಚಿವೆ. ಕೂಡಲೇ‌ ಕೆಲ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹಲವು ದಿನಗಳಿಂದ ಫ್ರೀಡಂ ಪಾರ್ಕ್ ಮುಂದಿದ್ದ ಮರದಲ್ಲಿ ಹೆಜ್ಜೇನು ಗೂಡು ಕಟ್ಟಿತ್ತು.

(ಇದನ್ನೂ ಓದಿ: ತಂದೆಯ ಕ್ಷೇತ್ರದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದು ಸೋತ ಪರಿಕ್ಕರ್​​ ಮಗ.. ಪಣಜಿಯಲ್ಲಿ ಅರಳಿದ ಕಮಲ)

Last Updated : Mar 10, 2022, 1:05 PM IST

ABOUT THE AUTHOR

...view details