ಬೆಂಗಳೂರು:ಬೆಡ್ ಬುಕ್ಕಿಂಗ್ ದಂಧೆಯನ್ನು ಬಯಲು ಮಾಡುವ ಮೊದಲೇ ದಕ್ಷಿಣ ವಲಯದ ವಾರ್ ರೂಂನಲ್ಲಿ ಹಲವಾರು ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಗಳು ನಡೆದಿದ್ದವು ಎಂಬ ವಿಷಯಗಳು ವರದಿಯಾಗುತ್ತಿವೆ. ಶಾಸಕ ಸತೀಶ್ ರೆಡ್ಡಿ ತಮ್ಮ ಬೆಂಬಲಿಗರನ್ನು ವಾರ್ ರೂಂನಲ್ಲಿ ಬೆಡ್ ಬುಕ್ಕಿಂಗ್ಗಾಗಿ ಇರಿಸಿದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಐಎಎಸ್ ಅಧಿಕಾರಿಯ ಮೇಲೆ ಬೆಂಬಲಿಗರಿಂದ ಹಲ್ಲೆ ನಡೆಸಿದ ಘಟನೆಗಳೂ ವಿಡಿಯೋ ಸಹಿತ ಬಹಿರಂಗಗೊಂಡಿವೆ.
ಇನ್ನು ಮೇ 4 ರಂದು ಸುದ್ದಿಗೋಷ್ಟಿ ನಡೆಸಿ ಹಗರಣ ಬಯಲು ಮಾಡಿದ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದಷ್ಟು ಮುಸ್ಲಿಂ ಸಮುದಾಯದ ಸಿಬ್ಬಂದಿ ಹೆಸರಷ್ಟೇ ಓದಿ ಹೇಳಿದ್ದರು. ಆದರೆ ಅಸಲಿಗೆ ಆ ಸಿಬ್ಬಂದಿಯನ್ನು ಮೊದಲೇ ಕೆಲಸದಿಂದ ತೆಗೆದು ಹಾಕಲಾಗಿತ್ತು. ನೂರಾರು ನೌಕರರ ಮಧ್ಯೆ ಆ ಒಂದೇ ಸಮುದಾಯದ 17 ಸಿಬ್ಬಂದಿಯನ್ನು ಮೊದಲೇ ಕೆಲಸದಿಂದ ತೆಗೆದುಹಾಕಿದ್ದರೂ, ಮತ್ತೆ ಅವರ ಹೆಸರು ಕೇಳಿಬಂದಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.
17 ಜನರನ್ನು ಮೊದಲೇ, ಕೆಲವು ದಿನಗಳ ಹಿಂದೆಯೇ ಕೆಲಸದಿಂದ ತೆಗೆದುಹಾಕಲಾಗಿದೆ. ಅವರು ಸದ್ಯಕ್ಕೆ ಕೆಲಸ ಮಾಡುತ್ತಿರಲಿಲ್ಲ ಎಂಬ ವರದಿ ಬಂದಿದೆ ಎಂದು ಮುಖ್ಯ ಆಯುಕ್ತರು ಬೆಡ್ ಬುಕ್ಕಿಂಗ್ ದಂಧೆ ಬಯಲು ಮಾಡಿದ ಮರುದಿನ (ಮೇ-5) ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
'ಬೆಡ್ ಬುಕ್ಕಿಂಗ್ ದಂಧೆ ಬಯಲಾಗುವ ಮೊದಲೇ 17 ಜನರನ್ನು ವಜಾಗೊಳಿಸಲಾಗಿತ್ತಂತೆ' - ಕರ್ನಾಟಕ ಕೋವಿಡ್ ಸಾವು
17 ಜನರನ್ನು ಮೊದಲೇ, ಕೆಲವು ದಿನಗಳ ಹಿಂದೆಯೇ ಕೆಲಸದಿಂದ ತೆಗೆದುಹಾಕಲಾಗಿದೆ. ಅವರು ಸದ್ಯಕ್ಕೆ ಕೆಲಸ ಮಾಡುತ್ತಿರಲಿಲ್ಲ ಎಂಬ ವರದಿ ಬಂದಿದೆ ಎಂದು ಮುಖ್ಯ ಆಯುಕ್ತರು ಬೆಡ್ ಬುಕ್ಕಿಂಗ್ ದಂಧೆ ಬಯಲು ಮಾಡಿದ ಮರುದಿನ (ಮೇ-5) ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ 17 ಸಿಬ್ಬಂದಿ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಸುಳ್ಳು. ಹಾಸಿಗೆ ನಿಯೋಜಿಸುವ ಅಧಿಕಾರ ಹಿರಿಯ ಅಧಿಕಾರಿಗಳು ಮತ್ತು ವೈದ್ಯರಿಗೆ ಇರುತ್ತದೆ. ನಾವು ನಿಯೋಜಿಸಿರುವ ಸಿಬ್ಬಂದಿಗೆ ಅಂತಹ ಅಧಿಕಾರವೇ ಇಲ್ಲ ಎಂದು ನೌಕರರನ್ನು ಪೂರೈಸಿದ್ದ ಗುತ್ತಿಗೆ ಸಂಸ್ಥೆಯಾದ ಕ್ರಿಸ್ಟಲ್ ಏಜಿನ್ಸಿಯ ಮುಖ್ಯಸ್ಥರೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಬೆಡ್ ಬುಕ್ಕಿಂಗ್ ದಂಧೆಯಲ್ಲಿ ಸಾಮಾನ್ಯ ನೌಕರರು, ಸಿಬ್ಬಂದಿಯನ್ನು ಕೂಡಾ ಹೊಣೆ ಮಾಡಿದ್ದರಿಂದ, ವಾರ್ ರೂಂನ ಇತರ ಸಿಬ್ಬಂದಿ ಕೂಡ ಭೀತಿಗೊಳಗಾಗಿದ್ದರು. ಈ ಬಗ್ಗೆ ಮಾತನಾಡಿದ ವಿಶೇಷ ಆಯುಕ್ತೆ, ವಾರ್ ರೂಂ ನೋಡಲ್ ಅಧಿಕಾರಿ ತುಳಸಿ ಮದ್ದಿನೇನಿ, ವಾರ್ ರೂಂನಲ್ಲಿ ಸಾಕಷ್ಟು ಸಿಬ್ಬಂದಿ ಕಾಲೇಜು ಮುಗಿಸಿ ಬಂದವರಿದ್ದಾರೆ. ಮಾಧ್ಯಮಗಳ ಸುದ್ದಿ ಕೇಳಿ, ಅವರ ಪೋಷಕರಿಂದ ಒತ್ತಡ ಬಿದ್ದು, ಮರುದಿನ ಕೆಲಸಕ್ಕೆ ಗೈರಾಗಿದ್ದರು. ನಂತರ ಧೈರ್ಯ ತುಂಬಲಾಗಿದೆ. ಜನರ ಜೀವ ಉಳಿಸುವುದಕ್ಕಾಗಿ ನಮ್ಮ ಕೈಲಾದ ಸಹಾಯ ಮಾಡಬೇಕು. ಹೆದರಬೇಡಿ, ನೀವ್ಯಾರೂ ತಪ್ಪು ಮಾಡಿಲ್ಲ ಎಂದು ಅವರಿಗೆ ಧೈರ್ಯ ತುಂಬಲಾಗಿದೆ ಎಂದು ತಿಳಿಸಿದರು.
ಮರುದಿನವೇ ಸಂಸದ ತೇಜಸ್ವಿ ಸೂರ್ಯ ಕೂಡಾ ವಾರ್ ರೂಂ ತೆರಳಿ ಸಿಬ್ಬಂದಿಯಲ್ಲಿ ಕ್ಷಮೆಯಾಚನೆ ಮಾಡಿದ್ದರು. (ಸರ್ಕಾರಿ ಕೋಟಾದ ಬೆಡ್ಗಳ ದುರುಪಯೋಗ.. ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ)