ಕರ್ನಾಟಕ

karnataka

ETV Bharat / city

ಇನ್​​ಸ್ಟಾಗ್ರಾಮ್​ಗೆ ಫೋಟೋ, ವಿಡಿಯೋ ಪೋಸ್ಟ್ ಮಾಡುವಾಗ ಜೋಕೆ... ಏಕೆಂದ್ರೆ? - bengaluru cyber crime

ವಿದ್ಯಾರ್ಥಿನಿಯ ಇನ್​ಸ್ಟಾಗ್ರಾಮ್ ವಿಡಿಯೋ, ಫೋಟೋ ಡೌನ್​ಲೋಡ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದ ಖದೀಮನನ್ನು ಸಂಜಯ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

instagram
ಇನ್​​ಸ್ಟಾಗ್ರಾಮ್​ಗೆ ಫೋಟೋ, ವಿಡಿಯೋ ಪೋಸ್ಟ್ ಮಾಡುವಾಗ ಜೋಕೆ

By

Published : Nov 3, 2020, 2:42 AM IST

ಬೆಂಗಳೂರು: ಸೈಬರ್ ಖದೀಮರು ಇನ್​ಸ್ಟ್ರಾಗ್ರಾಮ್​ ಫೋಟೊ, ಡಾನ್ಸ್ ವಿಡಿಯೋ ಡೌನ್​ಲೋಡ್ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಸಿದ ಘಟನೆ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊರೊನಾ ಹಿನ್ನೆಲೆ ಆನ್​ಲೈನ್ ಕ್ಲಾಸ್​ಗೋಸ್ಕರ ಮೋಹನ್ ಕುಮಾರ್ ಅವರು 6ನೇ ತರಗತಿ ಓದುತ್ತಿದ್ದ ತಮ್ಮ ಮಗಳಿಗೆ ಮೊಬೈಲ್ ಕೊಡಿಸಿದ್ದರು. ಪಾಠ ಕೇಳಿದ ಬಳಿಕ ವಿದ್ಯಾರ್ಥಿನಿ ತನ್ನ ಇನ್​ಸ್ಟ್ರಾಗ್ರಾಮ್ ಅಕೌಂಟ್​ನಲ್ಲಿ ಭಾವಚಿತ್ರ ಹಾಗೂ ನೃತ್ಯ ಮಾಡಿದ ವಿಡಿಯೋ ಅಪ್ ಲೋಡ್ ಮಾಡಿಕೊಂಡಿದ್ದಾಳೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಸ್ಥಳೀಯ ಸೈಬರ್ ಕಿರಾತಕರು, ವಿಡಿಯೊ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿನಿಗೆ ಕರೆ ಮಾಡಿ ಬೆದರಿಸಿದ್ದಾರೆ. ಹೇಳಿದಂತೆ ಕೇಳದಿದ್ದರೆ ವಿಡಿಯೋ ತಿರುಚಿ ಮಾರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಅ.30ರಂದು ಕರೆ ಮಾಡಿ ಮನೆ ಹತ್ತಿರ ಬರುವಂತೆ ಬೆದರಿಸಿದ್ದರು.

ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ, ತಂದೆಗೆ ನಡೆದ ವಿಷಯ ಹೇಳಿದ್ದಾಳೆ. ವಿಷಯ ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿನಿಯ ತಂದೆ, ಸಂಜಯ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಆಧರಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details