ಬೆಂಗಳೂರು:ನಿನ್ನೆ ರಾತ್ರಿ ನಾಯಂಡಹಳ್ಳಿಯಲ್ಲಿ ಬಿಬಿಎಂಪಿ ಕಸದ ಲಾರಿ ಹೊಡೆದು ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಆಗಿದ್ದ ಪದ್ಮಿನಿ ಸಾವನ್ನಪ್ಪಿದ್ದಾರೆ. ಇವರಿಗೆ ಯುವನ್ ಎಂಬ ಗಂಡು ಮಗುವಿದ್ದು, ಸಣ್ಣ ವಯಸ್ಸಿನಲ್ಲೇ ತಂದೆ ತಾಯಿ ಇಬ್ಬರನ್ನೂ ಮಗು ಕಳೆದುಕೊಂಡಿದೆ. ಮೂಲತಃ ಆಂಧ್ರಪ್ರದೇಶದವರಾದ ಮೃತ ಪದ್ಮಿನಿ ಎಸ್ ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದು, ಕಳೆದ 2010 ರಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿತ್ತು.
ಚಂದ್ರಾಲೇಔಟ್ ಎಸ್ಬಿಐ ಬ್ಯಾಂಕ್ನಲ್ಲಿ ಅಕೌಂಟೆಡ್ ಆಗಿದ್ದ ಪದ್ಮಿನಿ ತಂದೆ, ತಾಯಿ, ಹಾಗೂ ಮಗ ಯುವಾನ್ ಜೊತೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ವಾಸವಿದ್ದರು. ಕೆಲಸ ಮುಗಿಸಿ ಮನೆಗೆ ಹೊರಟಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಹಿಂಬದಿಯಿಂದ ಬಿಬಿಎಂಪಿ ಕಸದ ಲಾರಿ ಪದ್ಮಿನಿ ಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪದ್ಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪದ್ಮಿನಿ ಸಾವು ಐದು ವರ್ಷದ ಪುಟಾಣಿಯನ್ನು ಅನಾಥವಾಗಿಸಿದೆ. ನತದೃಷ್ಟ ವಿಷಯ ಏನೆಂದರೆ ಮೂರು ವರ್ಷಗಳ ಹಿಂದೆಯಷ್ಟೇ ಪತಿ ಸಹ ಸಾವನ್ನಪ್ಪಿದ್ದರು. ಆರ್ಕಿಟೆಕ್ಟ್ ಆಗಿ ಕೆಲಸ ಮಾಡ್ತಿದ್ದ ಪದ್ಮಿನಿ ಕೆಲಸ ವೇಳೆ ತಲೆಗೆ ಕಲ್ಲು ಬಿದ್ದು ಒಂದು ವರ್ಷಗಳ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದರು. ಇದೀಗ ಮೂರು ವರ್ಷಗಳ ಬಳಿಕ ಪದ್ಮನಿಯೂ ಇಹಲೋಕ ತ್ಯಜಿಸಿದ್ದು, ಈ ನಡುವೆ ಈ ಲೋಕದ ಪರಿವೇ ಇಲ್ಲದ ಯುವಾನ್ ಎಂಬ ಪುಟ್ಟ ಕಂದಮ್ಮ ಅನಾಥವಾಗಿ ಅಜ್ಜಿಯ ಮಡಿಲಿಗೆ ಬಿದ್ದಿದೆ.