ಕರ್ನಾಟಕ

karnataka

ETV Bharat / city

ಕೋವಿಡ್ ಟಫ್ ರೂಲ್ಸ್ ಸಡಿಲಿಕೆಗೆ ಶುಕ್ರವಾರ ನಿರ್ಣಾಯಕ ದಿನ: ತ್ರಿಲೋಕ್​ ಚಂದ್ರ - ಒಮಿಕ್ರಾನ್ ಕೇಸ್‌ಗಳ ಸಂಖ್ಯೆ ಹೆಚ್ಚಳ

ಜಿನೋಮ್ ಸೀಕ್ವೆನ್ಸಿಂಗ್​ಗೆ ಒಳಪಡಿಸುವ ಶೇ.90 ರಷ್ಟು ಜನರಲ್ಲಿ ಒಮಿಕ್ರಾನ್ ಕಂಡು ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೆ 300 ಜನರ ಸ್ವಾಬ್ ಪಡೆದು ಜಿನೋವಿಕ್ ಟೆಸ್ಟ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್​ ಚಂದ್ರ ಮಾಹಿತಿ ನೀಡಿದ್ದಾರೆ.

ತ್ರಿಲೋಕ್​ ಚಂದ್ರ
ತ್ರಿಲೋಕ್​ ಚಂದ್ರ

By

Published : Jan 26, 2022, 12:19 PM IST

ಬೆಂಗಳೂರು: ಕೋವಿಡ್ ಟಫ್ ರೂಲ್ಸ್ ಸಡಿಲಿಕೆಗೆ ಶುಕ್ರವಾರ ನಿರ್ಣಾಯಕ ದಿನ. ಈ ವಾರದ ಕೇಸ್​ಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಕೇಸ್‌ಗಳ ವರದಿಯ ಆಧಾರದಲ್ಲಿ ಟಫ್ ರೂಲ್ಸ್ ರಿಲೀಫ್‌ಗೆ ಚಿಂತನೆ ನಡೆಸಲಾಗುತ್ತದೆ. ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿದರು.

ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಕೋವಿಡ್ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಕಚೇರಿಯ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಗೆ ಗೈರಾಗಿದ್ದರು. ಹೀಗಾಗಿ, ಬಿಬಿಎಂಪಿಯಲ್ಲಿ ಗಣರಾಜೋತ್ಸವ ಆಚರಣೆಯ ಕಾರ್ಯಕ್ರಮವನ್ನು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಧ್ವಜಾರೋಹಣ ನೆರವೇರಿಸುವ ಮೂಲಕ ನಡೆಸಿಕೊಟ್ಟರು. ಈ ವೇಳೆ, ಬಿಬಿಎಂಪಿ ವಿಶೇಷ ಆಯುಕ್ತರುಗಳು, ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದರು.

ಬಿಬಿಎಂಪಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ, ಪಾಲಿಕೆ ಮುಖ್ಯ ಆಯುಕ್ತರು ಕೋವಿಡ್​ಗೆ ತುತ್ತಾಗಿದ್ದಾರೆ. ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತ ಅವರಿಗೆ ನಿನ್ನೆ ರಾತ್ರಿ ಕೋವಿಡ್​ ಸೋಂಕು ಧೃಡಪಟ್ಟಿದೆ ಎಂದು ತಿಳಿಸಿದರು.

ಜಿನೋಮ್ ಸೀಕ್ವೆನ್ಸಿಂಗ್​ನಲ್ಲಿ ಒಮಿಕ್ರಾನ್ ಕೇಸ್​ಗಳ ಸಂಖ್ಯೆ ಹೆಚ್ಚಳ:ಜಿನೋಮ್ ಸೀಕ್ವೆನ್ಸಿಂಗ್​ಗೆ ಒಳಪಡಿಸುವ ಶೇ.90 ರಷ್ಟು ಜನರಲ್ಲಿ ಒಮಿಕ್ರಾನ್ ಕಂಡು ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೆ 300 ಜನರ ಸ್ವಾಬ್ ಪಡೆದು ಜಿನೋವಿಕ್ ಟೆಸ್ಟ್ ಮಾಡಲಾಗುತ್ತದೆ ಎಂದು ತ್ರಿಲೋಕ ಚಂದ್ರ ಮಾಹಿತಿ ನೀಡಿದರು.

ಶಾಲೆಗಳ ಆರಂಭಕ್ಕೆ ಕೇಸ್‌ಗಳ ವರದಿ ಆಧರಿಸಿ ನಿರ್ಧಾರ:ಮಕ್ಕಳ ಕೇಸ್​ಗಳ ಸಂಖ್ಯೆ ಹಾಗೂ ರಿಕವರಿ ರೇಟ್ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಶುಕ್ರವಾರದವರೆಗಿನ ಅಂಕಿ ಅಂಶ ನೋಡಿ ಎಲ್ಲವನ್ನೂ ತೀರ್ಮಾನಿಸಲಾಗುವುದು. ಈ ಕುರಿತು ಸಿಎಂ ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ. ಸಿಎಂ ನೇತೃತ್ವದ ಸಭೆಯಲ್ಲಿ ಅಂಕಿ - ಅಂಶಗಳನ್ನು ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಪ್ರಸ್ತುತ ಪಡಿಸಲಿದ್ದಾರೆ. ನಂತರ ರೋಲ್ಸ್ ಸಡಿಲಿಕೆ ಬಗ್ಗೆ ತೀರ್ಮಾನವಾಗಲಿದೆ. ನಿನ್ನೆಯೂ ತಾಂತ್ರಿಕ ಸಮಿತಿ ಜೊತೆ ಸಭೆ ನಡೆಸಲಾಗಿದೆ. ಈ ವಾರದ ಸಂಪೂರ್ಣ ಅಂಕಿ ಅಂಶ ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details