ಬೆಂಗಳೂರು: ಯಲಹಂಕ ವಲಯದ ಕೋಡಿಗೆಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಭದ್ರಪ್ಪ ಲೇಔಟ್ ಮುಖ್ಯ ರಸ್ತೆಯ ಎಕ್ಕೆಲುಗಳಲ್ಲಿರುವ ಕೋಡಿಗೆಹಳ್ಳಿ ಗ್ರಾಮದ ಸರ್ವೇ ಸಂ. 46 ಮತ್ತು 47 ರಲ್ಲಿ ಹಾಲಿ ಇರುವ ವಿಸ್ತೀರ್ಣಕ್ಕೆ ಹೆಚ್ಚುವರಿಯಾಗಿ 10 ಗುಂಟೆ (6,27,26,400 ರೂ. ಮೌಲ್ಯದ) ಸರ್ಕಾರದ ಕೆರೆ ಏರಿಯ ಜಾಗವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶಪಡಿಸಿಕೊಂಡಿದೆ.
ಅತಿಕ್ರಮಣವಾಗಿದ್ದ 6 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗ ವಶಕ್ಕೆ ಪಡೆದ ಬಿಬಿಎಂಪಿ - BBMP seized government lands which was encroached
ಅತಿಕ್ರಮಣವಾಗಿದ್ದ 6 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಬಿಬಿಎಂಪಿ ವಶಕ್ಕೆ ಪಡೆದುಕೊಂಡಿದೆ.
ಅತಿಕ್ರಮಣವಾಗಿದ್ದ ಸರ್ಕಾರಿ ಜಾಗ ಬಿಬಿಎಂಪಿ ವಶಕ್ಕೆ
ಇದನ್ನೂ ಓದಿ:ರೈತರಿಗೆ ಸಿಹಿ ಸುದ್ದಿ.. ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿಗೆ ಸರ್ಕಾರ ನಿರ್ಧಾರ
ಭೂಮಿ ಅತಿಕ್ರಮಣವಾಗಿರುವುದಾಗಿ ಯಲಹಂಕದ ಭೂದಾಖಲೆಗಳ ನಿರ್ದೇಶಕರು ದೃಢೀಕರಿಸಿದ್ದರು. ಈ ಸಂಬಂಧ ಭೂದಾಖಲೆಗಳ ನಿರ್ದೇಶಕರು ನೀಡಿದ ನಕ್ಷೆಯಂತೆ ಶುಕ್ರವಾರ ಪಾಲಿಕೆಯ ತಂಡ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಂಡು ಅತಿಕ್ರಮಣ ಮಾಡಿಕೊಂಡಿದ್ದ, ಖಾಸಗಿ ಸ್ವಾಧೀನದಲ್ಲಿನ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡಿದೆ ಎಂದು ಯಲಹಂಕ ವಲಯದ ಜಂಟಿ ಆಯುಕ್ತೆ ಪೂರ್ಣಿಮಾ ತಿಳಿಸಿದ್ದಾರೆ.