ಕರ್ನಾಟಕ

karnataka

By

Published : Feb 11, 2022, 2:01 AM IST

ETV Bharat / city

ಬೆಂಗಳೂರಿನಲ್ಲಿ 1,200ಕ್ಕೂ ಅಧಿಕ ಫ್ಲೆಕ್ಸ್​, ಬ್ಯಾನರ್​ ತೆರವು

ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ಮುಖ್ಯ ಇಂಜಿನಿಯರ್​ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಗ್​ಗಳ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ.

BBMP removes flexes in Bengaluru
BBMP removes flexes in Bengaluru

ಬೆಂಗಳೂರು:ಅನಧಿಕೃತವಾಗಿ ಅಳವಡಿಕೆ ಮಾಡಲಾಗಿದ್ದ ಬ್ಯಾನರ್​, ಫ್ಲೆಕ್ಸ್​ ಹಾಗೂ ಬಂಟಿಗ್​​ಗಳನ್ನ ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಒಂದೇ ದಿನ 1,200ಕ್ಕೂ ಅಧಿಕ ಫ್ಲೆಕ್ಸ್​​ ತೆರವುಗೊಳಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್​​​ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ಎಲ್ಲ ವಲಯ ಮುಖ್ಯ ಇಂಜಿನಿಯರ್​​ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಗುರುವಾರದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಫೆಕ್ಸ್, ಬ್ಯಾನರ್​ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ನಿರ್ದೇಶಿಸಿದ ಹಿನ್ನಲೆಯಲ್ಲಿ ನಗರದಲ್ಲಿ ಎಲ್ಲೆಲ್ಲಿ ಫ್ಲೆಕ್ಸ್​​ಗಳನ್ನು ಅಳವಡಿಸಲಾಗಿದೆ ಅವುಗಳನ್ನು ತಕ್ಷಣವೇ ತೆರವು ಕಾರ್ಯ ನಡೆಸಲಾಯಿತು.

ಬೆಂಗಳೂರಿನಲ್ಲಿ 1,200ಕ್ಕೂ ಅಧಿಕ ಫ್ಲೆಕ್ಸ್​, ಬ್ಯಾನರ್​ ತೆರವು

ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ಮುಖ್ಯ ಇಂಜಿನಿಯರ್​ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಗ್​ಗಳ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಸುತ್ತಿದ್ದು, ರಸ್ತೆ ಬದಿಯ ವಿದ್ಯುತ್ ಕಂಬ, ಪಾದಚಾರಿ ಮಾರ್ಗ, ರಾಜಕಾಲುವೆಗೆ ಅಳವಡಿಸಿರುವ ಫೆನ್ಸಿಂಗ್​ಗಳ ಮೇಲಿನ ಫ್ಲೆಕ್ಸ್​​ಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿರಿ:ಕಳ್ಳತನದ ಸ್ಕೂಟರ್​ ಬಳಸಿ ಫೋನ್​ ಸ್ನ್ಯಾಚಿಂಗ್​:ಮೂವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಸ್ಕೂಟರ್, ಮೊಬೈಲ್​ ಫೋನ್ ವಶ

ಪಾಲಿಕೆ ವ್ಯಾಪ್ತಿಯ ಮಾರತಹಳ್ಳಿ, ವೈಟ್ ಫೀಲ್ಡ್, ಹೂಡಿ, ಹೆಚ್​ಬಿಆರ್ ಲೇಔಟ್, ಯಲಹಂಕ, ಥಣಿಸಂದ್ರ ಮುಖ್ಯ ರಸ್ತೆ, ರಾಜಾಜಿನಗರ, ಹೆಚ್​​ಎಸ್​ಆರ್​ ಲೇಔಟ್, ಬೇಗೂರು ಮುಖ್ಯ ರಸ್ತೆ, ಅಂಜನಾಪುರ, ಜ್ಞಾನ ಭಾರತಿ ಲೇಔಟ್, ದಾಸರಹಳ್ಳಿ ಸೇರಿದಂತೆ ಇನ್ನಿತರೆ ಕಡೆ ಫ್ಲೆಕ್ಸ್​​​ಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.

1,200ಕ್ಕೂ ಹೆಚ್ಚು ಫ್ಲೆಕ್ಸ್​​​ಗಳ ತೆರವು:ಎಲ್ಲೆಲ್ಲಿ ಫ್ಲೆಕ್ಸ್​​ಗಳನ್ನು ಅಳವಡಿಸಲಾಗಿದೆಯೋ ಅದನ್ನೆಲ್ಲ ತೆರವು ಮಾಡುವ ಕಾರ್ಯ ನಡೆಯುತ್ತಿದ್ದು, ನಿನ್ನೆ ನಗರದಾದ್ಯಂತ ಸುಮಾರು 1,200ಕ್ಕೂ ಹೆಚ್ಚು ಫ್ಲೆಕ್ಸ್​​​ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಅನಧಿಕೃತ ಫ್ಲೆಕ್ಸ್​​ಗಳ ತೆರವು ಕಾರ್ಯಚರಣೆ ಮುಂದುವರೆಯಲಿದೆ ಎಂದು ಹೇಳಿದೆ.

ABOUT THE AUTHOR

...view details