ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ 2ನೇ ಹಂತದ ಅನ್​ಲಾಕ್: ಏನುಂಟು, ಏನಿಲ್ಲ..?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೊರೊನಾ ಎರಡನೇ ಅಲೆ ಇದ್ದು, ಕೋವಿಡ್ -19 ಸೋಂಕು ಪ್ರಕರಣಗಳು ದಿನೇ ದಿನೇ ಇಳಿಕೆಯಾಗುತ್ತಿರುವುದು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೋಮವಾರದಿಂದ ಮೊದಲನೇ ಹಂತದ ಅನ್​​​​ಲಾಕ್ ಘೋಷಿಸಿದ್ದು, 2ನೇ ಹಂತದ ಅನ್​​ಲಾಕ್​ ಬಗ್ಗೆ ಬಿಬಿಎಂಪಿ ಆಯುಕ್ತರು ಇಂದು ಮಾಹಿತಿ ನೀಡಿದ್ದಾರೆ.

bbmp-release-2nd-stage-unlock-guidelines
ರಾಜಧಾನಿಯಲ್ಲಿ 2ನೇ ಹಂತದ ಅನ್​ಲಾಕ್

By

Published : Jun 15, 2021, 3:32 PM IST

Updated : Jun 15, 2021, 3:40 PM IST

ಬೆಂಗಳೂರು:ಎರಡನೇ ಹಂತದ ಅನ್​​ಲಾಕ್ ವೇಳೆ ಬೆಂಗಳೂರಲ್ಲಿ ಏನೆಲ್ಲಾ ಇರಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕೋವಿಡ್ ಪ್ರಕೋಪದ ವೇಳೆಗೆ ಹಲವು ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಯಾವುದಕ್ಕೆಲ್ಲಾ ಅವಕಾಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.

ರಾಜಧಾನಿಯಲ್ಲಿ 2ನೇ ಹಂತದ ಅನ್​ಲಾಕ್

ಜನರ ಪ್ರಮುಖ ಬೇಡಿಕೆ ಮೊದಲು ಈಡೇರಿಸಲು ಅವಕಾಶ ಕೊಡಲಾಗುವುದು. ದಿನನಿತ್ಯದ ಅವಶ್ಯಕತೆಗಳು, ಫ್ಯಾಕ್ಟರಿ ಕೆಲಸಗಳು, ಕಟ್ಟಡ ಕೆಲಸಗಳಿಗೆ ಬೇಕಾದ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಒಮ್ಮೆಲೇ ಎಲ್ಲವನ್ನೂ ತೆರೆಯದೆ, ಹಂತಹಂತವಾಗಿ ಸಮಯ ಇಟ್ಟು ತೆರೆಯಲು ಅವಕಾಶ ಕೊಡಲಾಗುವುದು. ಆರೋಗ್ಯದ ದೃಷ್ಟಿಯಿಂದ ಹೋಟೆಲ್ ನಲ್ಲಿ ಕುಳಿತು ಊಟ ಮಾಡುವ ಅವಕಾಶವನ್ನು ಬಹಳ ಯೋಚಿಸಿ ಅನುವು ಮಾಡಲಾಗುವುದು ಎಂದು ಮುನ್ಸೂಚನೆ ನೀಡಿದರು.

ಓದಿ:ಅನ್​ಲಾಕ್​​ ನಲ್ಲೂ‌ ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ರಣತಂತ್ರ: ಹೊಸ ಆದೇಶದಲ್ಲಿ ಏನಿದೆ ಗೊತ್ತಾ?

ಮಾರುಕಟ್ಟೆಗಳು ಕೂಡಾ ಪ್ರಮುಖವಾಗಿದ್ದು, ಹೆಚ್ಚು ಜನ ಸೇರದಂತೆ ಮಾಡಲು ಮಾರುಕಟ್ಟೆ ತೆರೆಯದಿರಲು ಚಿಂತಿಸಲಾಗಿದೆ‌. ಮಾಲ್, ಸಿನಿಮಾ ಮಂದಿರಗಳನ್ನು ನಿಯಂತ್ರಣ ಇಲ್ಲದೆ ತೆರೆದರೆ ಕೋವಿಡ್ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು. ದೇವಸ್ಥಾನ, ಮದುವೆ, ಸಮಾರಂಭಗಳಲ್ಲೂ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಯಾವ ಹಂತದಲ್ಲಿ ತೆರೆಯಬೇಕು ಎಂದು ತಜ್ಞರ ಅಭಿಪ್ರಾಯದ ಪ್ರಕಾರ ನಿರ್ಧರಿಸಲಾಗುವುದು ಎಂದರು.

ಸೋಂಕು ಹೆಚ್ಚು ಇದ್ದಾಗ ವಾರ್ ರೂಂಗಳ ಸಿಬ್ಬಂದಿ ಸಂಖ್ಯೆ, ಶವ ಸಾಗಾಣಿಕೆಯ ವಾಹನ, ಆಂಬ್ಯುಲೆನ್ಸ್ ಗಳ ಸಂಖ್ಯೆ ಹೆಚ್ಚು ಇದ್ದವು, ಇದನ್ನು ಕಡಿಮೆ ಮಾಡಬೇಕಿದೆ ಎಂದರು. ಅದೇ ರೀತಿ ಫೀಲ್ಡ್ ಹಂತದಲ್ಲಿ ಇರುವ ಟ್ರಯಾಜಿಂಗ್ ಸೆಂಟರ್, ಟೆಸ್ಟಿಂಗ್ ಪ್ರಮಾಣ ಮುಂದುವರಿಸಲಾಗುವುದು ಎಂದು ಗೌರವ್​ ಗುಪ್ತಾ ಹೇಳಿದರು.

Last Updated : Jun 15, 2021, 3:40 PM IST

ABOUT THE AUTHOR

...view details