ಕರ್ನಾಟಕ

karnataka

ETV Bharat / city

ಬಿಬಿಎಂಪಿ ವ್ಯಾಪ್ತಿಯ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧ : ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ - BBMP plans to demolishing unauthorized religious buildings

ಖಾಸಗಿ ಜಾಗದಲ್ಲಿ 2009ಕ್ಕೂ ಮುನ್ನ ಇದ್ದ 3,916 ಕೇಂದ್ರಗಳ ಪೈಕಿ 42 ಕೇಂದ್ರಗಳನ್ನು ತೆರವು ಮಾಡಿ, 3,845 ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ. ಹಾಗೆ 29 ಕೇಂದ್ರಗಳನ್ನು ಸ್ಥಳಾಂತರಿಸಲಾಗಿದೆ. ಅದೇ ರೀತಿ 2009ರ ನಂತರ 379 ಅನಧಿಕೃತ ಧಾರ್ಮಿಕ ಕೇಂದ್ರಗಳಲ್ಲಿ 10 ಕೇಂದ್ರಗಳ ತೆರವು, 10 ಕೇಂದ್ರಗಳ ಸ್ಥಳಾಂತರ ಹಾಗೂ 359 ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ..

BBMP Commissioner Gaurav Gupta
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

By

Published : Sep 15, 2021, 7:48 PM IST

ಬೆಂಗಳೂರು :ರಾಜ್ಯಾದ್ಯಂತ ಅನಧಿಕೃತ ದೇವಸ್ಥಾನಗಳು ಹಾಗೂ ವಿವಿಧ ಧರ್ಮಗಳ ಪೂಜಾ ಕೇಂದ್ರಗಳ ತೆರವಿನ ಬೆನ್ನಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಇದರ ಪಟ್ಟಿ ಸಿದ್ಧವಾಗಿದೆ.

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧ : ಆಯುಕ್ತ ಗೌರವ್ ಗುಪ್ತಾ

ಒಟ್ಟು 456 ಪೂಜಾ ಕೇಂದ್ರಗಳು ಹಾಗೂ ದೇವಸ್ಥಾನಗಳು ಅನಧಿಕೃತವಾಗಿ, ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿರುವ ಪಟ್ಟಿ ಸಿದ್ಧಪಡಿಸಲಾಗಿದೆ. ಹೈಕೋರ್ಟ್‌ ಆದೇಶ ಹಿನ್ನೆಲೆ ಬಿಬಿಎಂಪಿಯ 8 ವ್ಯಾಪ್ತಿಯ ಜಂಟಿ ಆಯುಕ್ತರು ಈ ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಹಲವಾರು ಸಂಘಟನೆಗಳ ವಿರೋಧ ಈಗಾಗಲೇ ವ್ಯಕ್ತವಾಗಿದೆ.

ಬಿಬಿಎಂಪಿಯ 198 ವಾರ್ಡ್​ಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿದ ಒಟ್ಟು 6,406 ಧಾರ್ಮಿಕ ಕಟ್ಟಡಗಳು ನಗರದಲ್ಲಿವೆ. ಈ ಪೈಕಿ ಸರ್ಕಾರಿ ಜಾಗದಲ್ಲಿ 2,111 ಹಾಗೂ ಖಾಸಗಿ ಜಾಗದಲ್ಲಿ 4,295 ಧಾರ್ಮಿಕ ಕಟ್ಟಡಗಳಿವೆ.

2009ರ ಮೊದಲು ಹಾಗೂ 2009ರ ನಂತರ ನಿರ್ಮಾಣ ಮಾಡಿದ ಅನಧಿಕೃತ ದೇವಾಲಯಗಳೆಂದು ಪಟ್ಟಿ ಮಾಡಿದ್ದು, 2009ಕ್ಕೂ ಮುನ್ನ 1,870 ಸರ್ಕಾರಿ ಜಾಗದಲ್ಲಿ ಹಾಗೂ 3,916 ಖಾಸಗಿ ಭೂಮಿಯಲ್ಲಿ ನಿರ್ಮಾಣವಾಗಿವೆ. 2009ರ ನಂತರ ಸರ್ಕಾರಿ ಜಾಗದಲ್ಲಿ 241 ಹಾಗು ಖಾಸಗಿ ಭೂಮಿಯಲ್ಲಿ 379 ಧಾರ್ಮಿಕ ಕೇಂದ್ರಗಳು ನಿರ್ಮಾಣಗೊಂಡಿವೆ.

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

ಇದನ್ನೂ ಓದಿ:ಸುಪ್ರೀಂಕೋರ್ಟ್​​ ಆದೇಶದ ಮೇರೆಗೆ 19 ದೇವಾಲಯಗಳ ತೆರವು ಕಾರ್ಯಾಚರಣೆ ಆರಂಭ

ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಸರ್ಕಾರದಿಂದ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿ ಕೇಳಿತ್ತು. ಆಗ ಯಾವೆಲ್ಲ ಧಾರ್ಮಿಕ ಕೇಂದ್ರಗಳನ್ನು ಮಾರ್ಗಸೂಚಿ ಪ್ರಕಾರ ಕ್ರಮಬದ್ಧಗೊಳಿಸಲು ಸಾಧ್ಯವೋ ಅದನ್ನು ಕ್ರಮಬದ್ಧಗೊಳಿಸುವುದು. ಉಳಿದವುಗಳನ್ನು ಕೆಡವಬೇಕೆಂಬ ನಿರ್ದೇಶನ ಇತ್ತು.

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

ಉಳಿದಂತೆ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ವಲಯ ಮಟ್ಟದ ಅಧಿಕಾರಿಗಳು ಧಾರ್ಮಿಕ ಕಟ್ಟಡಗಳ ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಹೈಕೋರ್ಟ್ ಹಾಗೂ ಸರ್ಕಾರ ಕೊಡುವ ನಿರ್ದೇಶನದಂತೆ ಬಿಬಿಎಂಪಿ ನಡೆದುಕೊಳ್ಳಲಿದೆ. ಸ್ಥಳೀಯವಾಗಿ ಕೆಲವು ನಿರ್ಮಾಣವಾಗಿವೆ. ಕೆಲವರು ಅನುಮತಿ ಪಡೆದೆ ಕಟ್ಟಿರುತ್ತಾರೆ. ಆಯಾ ಜಾಗದ ಪ್ರಕರಣ ಒಂದೊಂದು ಇರುತ್ತದೆ ಎಂದರು.

2009ಕ್ಕೂ ಮುನ್ನ ಅನಧಿಕೃತವಾಗಿ ನಿರ್ಮಾಣವಾದ 223 ಪೂಜಾ ಕೇಂದ್ರಗಳನ್ನು ತೆರವುಗೊಳಿಸಲಾಗಿದ್ದು, 1,544 ಧಾರ್ಮಿಕ ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ. 103 ದೇವಸ್ಥಾನಗಳನ್ನು ಸ್ಥಳಾಂತರಿಸಲಾಗಿದೆ. 2009ರ ನಂತರ ನಿರ್ಮಾಣವಾದ ಧಾರ್ಮಿಕ ಕೇಂದ್ರಗಳಲ್ಲಿ 181 ಅನ್ನು ತೆರವುಗೊಳಿಸಲಾಗಿದ್ದು, 52 ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ.

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

ಖಾಸಗಿ ಜಾಗದಲ್ಲಿ 2009ಕ್ಕೂ ಮುನ್ನ ಇದ್ದ 3,916 ಕೇಂದ್ರಗಳ ಪೈಕಿ 42 ಕೇಂದ್ರಗಳನ್ನು ತೆರವು ಮಾಡಿ, 3,845 ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ. ಹಾಗೆ 29 ಕೇಂದ್ರಗಳನ್ನು ಸ್ಥಳಾಂತರಿಸಲಾಗಿದೆ. ಅದೇ ರೀತಿ 2009ರ ನಂತರ 379 ಅನಧಿಕೃತ ಧಾರ್ಮಿಕ ಕೇಂದ್ರಗಳಲ್ಲಿ 10 ಕೇಂದ್ರಗಳ ತೆರವು, 10 ಕೇಂದ್ರಗಳ ಸ್ಥಳಾಂತರ ಹಾಗೂ 359 ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದೆ.

ಈ ಸಂಪೂರ್ಣ ಪಟ್ಟಿ ಈ ವಾರದೊಳಗೆ ಅಂತಿಮಗೊಳ್ಳಲಿದೆ. ಸರ್ಕಾರಿ ಹಾಗೂ ಖಾಸಗಿ ಜಾಗಗಳಲ್ಲಿ 2009ಕ್ಕೂ ಮೊದಲು ಒಟ್ಟು 5,786 ಅನಧಿಕೃತ ಧಾರ್ಮಿಕ ಕೇಂದ್ರಗಳಲ್ಲಿ 265 ಕೇಂದ್ರಗಳ‌ನ್ನು ತೆರವು ಮಾಡಲಾಗಿದೆ. 5,389 ಕೇಂದ್ರಗಳನ್ನು ಅಧಿಕೃತಗೊಳಿಸಲಾಗಿದ್ದು, 132 ಕೇಂದ್ರಗಳನ್ನು ಸ್ಥಳಾಂತರಿಸಲಾಗಿದೆ. 2009ರ ನಂತರ 620 ಕೇಂದ್ರಗಳನ್ನು ಅನಧಿಕೃತವೆಂದು ಗುರುತಿಸಿದ್ದು, 191 ಕೇಂದ್ರಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ:ದೇವಾಲಯ ತೆರವು ವಿವಾದ: ಬಿಜೆಪಿ, ಜೆಡಿಎಸ್ ನಾಯಕರು ಹೇಳಿದ್ದೇನು?

ABOUT THE AUTHOR

...view details