ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆಯಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಮತ್ತು ಬಿಜೆಪಿ ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಕೋವಿಡ್-19 ವ್ಯವಸ್ಥೆಯ ವಿಫಲತೆ ಹಾಗೂ ಆ್ಯಂಬುಲೆನ್ಸ್ ಕೊರತೆ ಕುರಿತು ರಮೇಶ್ಗೌಡ ಅವರು ಮೇಯರ್, ಆಯುಕ್ತರ ಗಮನಕ್ಕೆ ತಂದರು. ಅದಕ್ಕೆ ಮೇಯರ್, ನಗರದಲ್ಲಿ 700 ಆ್ಯಂಬುಲೆನ್ಸ್ಗಳಿವೆ ಎಂದರು. ಅಷ್ಟು ಖಂಡಿತವಾಗಿಯೂ ಇಲ್ಲ. ವಾರ್ಡ್ಗೆ ಎರಡು ಆ್ಯಂಬುಲೆನ್ಸ್ ನೀಡಿ, ಅದನ್ನು ಸಾಬೀತುಪಡಿಸಿ ಎಂದು ಮನವಿ ಮಾಡಿದರು.