ಬೆಂಗಳೂರು:ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 'ಜನಗಣತಿ-2021'ರ ಪೂರ್ವತಯಾರಿ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಬಿಬಿಎಂಪಿ ಆಯುಕ್ತರು ಹಾಗೂ ಜನಗಣತಿ ನೋಡಲ್ ಅಧಿಕಾರಿ ಬಿ ಹೆಚ್ ಅನಿಲ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.
ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಮನೆಗಣತಿ ಹಾಗೂ ಮನೆಪಟ್ಟಿ 2020 ಏಪ್ರಿಲ್ 15 ರಿಂದ ಮೇ 29 ರವರೆಗೆ ನಡೆಯಲಿದೆ. ಫೆಬ್ರವರಿ 9 ರಿಂದ ಫೆಬ್ರವರಿ 28 ರವರೆಗೆ ಜನಗಣತಿ ನಡೆಯಲಿದೆ. ಜನಗಣತಿಯ ಪರಿಷ್ಕರಣೆ ಸುತ್ತು (ಬಿಟ್ಟೋದವರ ಪಟ್ಟಿಯನ್ನು ಸೇರಿಸಲು) 2021 ಮಾರ್ಚ್ 1 ರಿಂದ ಮಾರ್ಚ್ 5 ರವೆರೆಗೆ ನಡೆಯಲಿದೆ ಎಂದರು.