ಕರ್ನಾಟಕ

karnataka

ETV Bharat / city

ಅಣ್ಣಾವ್ರ ಹಾಡಿಗೆ ಸಖತ್​​ ಸ್ಟೆಪ್ಸ್​​​​ ಹಾಕಿದ ಬಿಬಿಎಂಪಿ ಮೇಯರ್​-ಕಮಿಷನರ್​​... ವಿಡಿಯೋ ನೋಡಿ - https://swachhsurvekshan2020.org/CitizenFeedback

ಸ್ವಚ್ಛ ಸರ್ವೇಕ್ಷಣ ಅಭಿಯಾನ-2020ರ ಜಾಗೃತಿ ಜಾಥಾದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಕನ್ನಡ ಹಾಡಿಗೆ ಹೆಜ್ಜೆ ಹಾಕಿದರು.

BBMP mayor-commissioner who puts steps into rajkumar song
ಸಖತ್​ ಸ್ಟೆಪ್ಸ್​ ಹಾಕಿದ ಬಿಬಿಎಂಪಿ ಮೇಯರ್-ಕಮಿಷನರ್

By

Published : Jan 25, 2020, 11:04 AM IST

ಬೆಂಗಳೂರು: ಸ್ವಚ್ಛ ಸರ್ವೇಕ್ಷಣ ಅಭಿಯಾನ-2020ರ ಜಾಗೃತಿ ಜಾಥಾದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಕನ್ನಡ ಹಾಡಿಗೆ ಹೆಜ್ಜೆ ಹಾಕಿದರು.

ಬಿಬಿಎಂಪಿ ಅಧಿಕಾರಿ, ನೌಕರರ ಸಂಘ ಹಡ್ಸನ್ ವೃತ್ತದ ಬಳಿ ಅಭಿಯಾನಕ್ಕೆ ಚಾಲನೆ ನೀಡಿದ ವೇಳೆ ಆರೋಗ್ಯಾಧಿಕಾರಿಗಳು, ವಿಶೇಷ ಆಯುಕ್ತ ಡಿ.ರಂದೀಪ್, ಮೇಯರ್ ಹಾಗೂ ಆಯುಕ್ತರು ಅಣ್ಣಾವ್ರ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಸಖತ್​ ಸ್ಟೆಪ್ಸ್​ ಹಾಕಿದ ಬಿಬಿಎಂಪಿ ಮೇಯರ್-ಕಮಿಷನರ್

ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾಮ ಸಿಗಬೇಕು. ಇದಕ್ಕೆ ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂಬ ಸಂದೇಶ ಸಾರಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಡಿ.ರಂದೀಪ್ ಮಾತನಾಡಿ, ಈವರೆಗೆ ಸಾರ್ವಜನಿಕರಿಂದ ಶೇ. 40ರಷ್ಟು ಪ್ರತಿಕ್ರಿಯೆ ದಾಖಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು. https://swachhsurvekshan2020.org/CitizenFeedback ಲಿಂಕ್​​ ಕ್ಲಿಕ್​ ಮಾಡಿ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details