ಕರ್ನಾಟಕ

karnataka

ETV Bharat / city

ಮಾಗಡಿ ಮೆಟ್ರೋ ಸ್ಟೇಷನ್​​ಗೆ ಅಣ್ಣಾವ್ರ ಹೆಸರಿಡಲು ಬಿಬಿಎಂಪಿ ಮೇಯರ್ ಮನವಿ - ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್

ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್​ಕುಮಾರ್ ಹೆಸರು ನಾಮಕರಣ ಮಾಡುವಂತೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸೇಥ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

BBMP mayor appeals for naming of Dr Raj Kumar for Magadi Road Metro
ಮಾಗಡಿ ರಸ್ತೆ ಮೆಟ್ರೋಗೆ ಡಾ.ರಾಜ್​ಕುಮಾರ್ ಹೆಸರಿಡಲು ಬಿಬಿಎಂಪಿ ಮೇಯರ್ ಮನವಿ

By

Published : Sep 4, 2020, 5:26 PM IST

ಬೆಂಗಳೂರು:ನಗರದ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್​ಕುಮಾರ್ ಹೆಸರು ನಾಮಕರಣ ಮಾಡುವಂತೆ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸೇಥ್ ಅವರಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಮಾಜಿ ಕಾರ್ಪೋರೇಟರ್ ಎನ್​.ಆರ್.ರಮೇಶ್ ಮನವಿ ಪತ್ರ ಸಲ್ಲಿಸಿದರು.

ಮಾಗಡಿ ರಸ್ತೆ ಮೆಟ್ರೋಗೆ ಡಾ.ರಾಜ್​ಕುಮಾರ್ ಹೆಸರಿಡಲು ಬಿಬಿಎಂಪಿ ಮೇಯರ್ ಮನವಿ

ಮಾಗಡಿ ರಸ್ತೆಯ ನಮ್ಮ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್​ಕುಮಾರ್ ಹೆಸರು ನಾಮಕರಣ ಮಾಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ, ಖುದ್ದಾಗಿ ಮೇಯರ್ ಅವರೇ ನಮ್ಮ ಮೆಟ್ರೋ ವ್ಯವಸ್ಥಾಪಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ‌.

ಬಿಬಿಎಂಪಿ ಮೇಯರ್ ಮನವಿಗೆ ಪೂರಕವಾಗಿ ಸ್ಪಂದಿಸಿರುವ ನಮ್ಮ ಮೆಟ್ರೋ ವ್ಯವಸ್ಥಾಪಕರು, ಶೀಘ್ರದಲ್ಲೇ ಮಾಗಡಿ ರಸ್ತೆ ನಿಲ್ದಾಣಕ್ಕೆ ಅಣ್ಣಾವ್ರ ಹೆಸರು ನಾಮಕರಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details