ಬೆಂಗಳೂರು:ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಗೇಟ್‌ನಿಂದ ಬಿಬಿಎಂಪಿ ಜಂಕ್ಷನ್ ವರೆಗೆ ಫುಟ್ಪಾತ್ಗಳನ್ನು ಆಕ್ರಮಿಸಿಕೊಂಡಿದ್ದ ಇಪ್ಪತ್ತಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ವೈಟ್ಫೀಲ್ಡ್ನಲ್ಲಿ ಶನಿವಾರ ನಡೆದಿದ್ದ 'ಸಂಚಾರ ಸಂಪರ್ಕ ದಿನ'ದಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮುಂದೆ ಕೆಲವು ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳು ಫುಟ್ಪಾತ್ ಆಕ್ರಮಿಸಿಕೊಂಡಿದ್ದು ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ ಎಂದು ದೂರು ಹೇಳಿಕೊಂಡಿದ್ದರು. ಈ ದೂರಿನನ್ವಯ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಬೀದಿ ವ್ಯಾಪಾರಿಗಳನ್ನು ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.