ಕರ್ನಾಟಕ

karnataka

ETV Bharat / city

ರಾಮಮಂದಿರ ನಿರ್ಮಾಣಕ್ಕೆ ಬೆಂಗಳೂರಿಗರಿಂದ ನಿರೀಕ್ಷೆಗೂ ಮೀರಿ ದೇಣಿಗೆ: ಡಿ.ವಿ. ಸದಾನಂದ ಗೌಡ - ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಜನರಿಂದ ನಿರೀಕ್ಷೆ ಮೀರಿ ದೇಣಿಗೆ ಸಂಗ್ರಹವಾಗುತ್ತಿದೆ. ಈ ಅಭಿಯಾನದಡಿ ಇಲ್ಲಿ 18 ಲಕ್ಷ ಕುಟುಂಬಗಳನ್ನು ತಲುಪುವ ನಿರೀಕ್ಷೆ ಮಾಡಿದ್ದೆವು. ಆದರೆ, ಈಗಾಗಲೇ 23 ಲಕ್ಷ ಕುಟುಂಬಗಳು ಮಂದಿರಕ್ಕೆ ನಿಧಿ ಸಮರ್ಪಿಸಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

BBMP Employees' Ram Mandir Fund Dedication Program
ಬಿಬಿಎಂಪಿ ನೌಕರರ ರಾಮಮಂದಿರ ನಿಧಿ ಸಮರ್ಪಣಾ ಕಾರ್ಯಕ್ರಮ

By

Published : Feb 16, 2021, 6:40 AM IST

ಬೆಂಗಳೂರು: ಬಿಬಿಎಂಪಿ ನೌಕರರ ರಾಮಮಂದಿರ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ 5 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದರು.

ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಬಿಬಿಎಂಪಿ ನೌಕರರ ಅಧ್ಯಕ್ಷ

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ರಾಮ ಮಂದಿರ ನಿರ್ಮಾಣದ ಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ದೊಡ್ಡ-ದೊಡ್ಡ ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಆದರೆ, ದೇಶದ ಶ್ರದ್ಧಾಳುಗಳೆಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂಬುದು ಮಂದಿರ ನಿರ್ಮಾಣ ಟ್ರಸ್ಟ್​ನ ಇಚ್ಛೆ. ಇದಕ್ಕೆ ಸಾಮಾನ್ಯರಿಂದ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ.

ಬಿಬಿಎಂಪಿ ನೌಕರರ ರಾಮಮಂದಿರ ನಿಧಿ ಸಮರ್ಪಣಾ ಕಾರ್ಯಕ್ರಮ

ರಾಮಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ಜನರಿಂದ ನಿರೀಕ್ಷೆ ಮೀರಿ ದೇಣಿಗೆ ಸಂಗ್ರಹವಾಗುತ್ತಿದೆ. ಈ ಅಭಿಯಾನದಡಿ ಇಲ್ಲಿ 18 ಲಕ್ಷ ಕುಟುಂಬಗಳನ್ನು ತಲುಪುವ ನಿರೀಕ್ಷೆ ಮಾಡಿದ್ದೆವು. ಆದರೆ, ಈಗಾಗಲೇ 23 ಲಕ್ಷ ಕುಟುಂಬಗಳು ಮಂದಿರಕ್ಕೆ ನಿಧಿ ಸಮರ್ಪಿಸಿವೆ ಎಂದು ಹೇಳಿದರು.

ಓದಿ:ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ: ಕಾಯ್ದೆ ಸಂಬಂಧ ಸರ್ಕಾರದಿಂದ ಅಧಿಸೂಚನೆ!

ಈ ವೇಳೆ ದಕ್ಷಿಣ ಪ್ರಾಂತ ಕಾರ್ಯವಾಹಕ ತಿಪ್ಪೇಸ್ವಾಮಿ, ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ, ಆಯುಕ್ತ ಮಂಜುನಾಥ ಪ್ರಸಾದ್, ಎಸ್.ಹರೀಶ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ABOUT THE AUTHOR

...view details