ಕರ್ನಾಟಕ

karnataka

ETV Bharat / city

ತುರ್ತಾಗಿ ಆಮ್ಲಜನಕ ಪೂರೈಕೆ ಮಾಡಲು ಕ್ಯಾಂಪ್ ಹಾಗೂ ನೋಡಲ್ ಅಧಿಕಾರಿಗಳ ನಿಯೋಜನೆ : ಗೌರವ್ ಗುಪ್ತಾ - ಬಿಬಿಎಂಪಿ ಮುಖ್ಯ ಆಯುಕ್ತರ ಸಭೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಲ್ಪ ಮತ್ತು ಮಧ್ಯಮ ಪ್ರಮಾಣದ ಲಕ್ಷಣಗಳುಳ್ಳ ಸೋಂಕಿತರ ಚಿಕಿತ್ಸೆಗಾಗಿ ಮತ್ತು ಮನೆಯಲ್ಲಿ ಅಥವಾ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದವರಿಗಾಗಿ ಪಾಲಿಕೆ 8 ವಲಯಗಳಲ್ಲಿ 14 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲಾಗುತ್ತಿರುತ್ತದೆ. ಇದರಲ್ಲಿ ಒಟ್ಟು 2,064 ಹಾಸಿಗೆ ಸಾಮರ್ಥ್ಯ ಇದ್ದು, 410 ಹಾಸಿಗೆಗಳು ಭರ್ತಿಯಾಗಿವೆ..

bbmp commissioner on oxygen supply in bengaluru
ತುರ್ತಾಗಿ ಆಮ್ಲಜನಕ ಪೂರೈಕೆ ಮಾಡಲು ಕ್ಯಾಂಪ್ ಹಾಗೂ ನೋಡಲ್ ಅಧಿಕಾರಿಗಳ ನಿಯೋಜನೆ: ಗೌರವ್ ಗುಪ್ತಾ

By

Published : May 7, 2021, 10:27 PM IST

ಬೆಂಗಳೂರು :ನಗರದಲ್ಲಿ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದಂತೆ ನೇಮಕ ಮಾಡಿರುವ ಆಕ್ಸಿಜನ್ ತಯಾರಿಕಾ ಘಟಕಗಳಲ್ಲಿ ನಿಯೋಜಿಸಿರುವ ಕ್ಯಾಂಪ್ ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಇಂದು ನಡೆದ ವರ್ಚುವಲ್ ಸಭೆ ನಡೆಸಲಾಯಿತು.

ಈ ಸಭೆ ನಂತರ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರು ಆಮ್ಲಜನಕ ಕೊರತೆಯಿಂದ ತೊಂದರೆಗೆ ಒಳಗಾಗುವುದನ್ನು ತಪ್ಪಿಸಲು ಆಸ್ಪತ್ರೆಗಳಿಗೆ ತುರ್ತಾಗಿ ಆಮ್ಲಜನಕ ಪೂರೈಕೆ ಮಾಡಲು ಕ್ಯಾಂಪ್ ಹಾಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಪುನಾಭರ್ತಿ ಆಮ್ಲಜನಕ ಏಜೆನ್ಸಿಗಳು ಪ್ರತಿನಿತ್ಯ ದಾಸ್ತಾನು, ಉತ್ಪಾದಿಸುವ ಹಾಗೂ ಆಸ್ಪತ್ರೆಗಳಿಗೆ ಪೂರೈಕೆ ಮಾಡುವ ವಿವರವನ್ನು ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಗೌರವ್ ಗುಪ್ತಾ

ಕೆಲ ಏಜೆನ್ಸಿಗಳು ಆಸ್ಪತ್ರೆಗೆ ಎಷ್ಟು ಆಮ್ಲಜನ ಪೂರೈಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತಿಲ್ಲ. ಈ ಪೈಕಿ ಆಮ್ಲಜನಕ ಪೂರೈಸುವ ಎಲ್ಲಾ ಏಜೆನ್ಸಿಗಳ ಬಳಿ ಕೂಡಲೇ ನಿಖರ ಮಾಹಿತಿ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಗಳಿಗೆ ಎಷ್ಟು ಪ್ರಮಾಣದ ಆಕ್ಸಿಜನ್ ಅಗತ್ಯವಿದೆ?, ಏಜೆನ್ಸಿಗಳು ಎಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತಿವೆ? ಎಂಬ ಮಾಹಿತಿ ಪಡೆಯಬೇಕು.

ವಲಯವಾರು ಆಸ್ಪತ್ರೆಗಳಲ್ಲಿ ಎಷ್ಟು ಆಮ್ಲಜನಕ ಪೂರೈಕೆಯಾಗಿದೆ ಎಂಬುದರ ಮಾಹಿತಿಯನ್ನು ಪಾಲಿಕೆ ಕೇಂದ್ರ ಕಚೇರಿಗೆ ಇ-ಮೇಲ್ ಮುಖಾಂತರ ಕಳುಹಿಸಿ ಪ್ರತಿದಿನ ರಾತ್ರಿ 9 ಗಂಟೆಯೊಳಗಾಗಿ ಆಕ್ಸಿಜನ್ ದಾಸ್ತಾನು, ಉತ್ಪಾದನೆ, ಪೂರೈಕೆಯ ಮಾಹಿತಿಯನ್ನು ಕ್ರೋಢೀಕರಿಸಿ ನೀಡಬೇಕು. ಇದರಲ್ಲಿ ಯಾವುದೇ ಸಮಸ್ಯೆಯಾಗದಂತೆ ಪ್ರತಿನಿತ್ಯ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಆಕ್ಸಿಜನ್ ಮೇಲ್ವಿಚಾರಣಾ ತಂಡದ ನಾಯಕರು ಡಿ.ರಂದೀಪ್ ಹಾಗೂ ಸಮಿತಿಯ ಸದಸ್ಯರುಗಳಾದ ಸಹಾಯಕ ಆಯುಕ್ತರು ನಾಗೇಂದ್ರ ನಾಯ್ಕ್, ಅಧೀಕ್ಷಕ ಅಭಿಯಂತರರು ಬಸವರಾಜ್ ಕಬಾಡೆ ಹಾಗೂ ಇನ್ನಿತರೇ ಅಧಿಕಾರಿಗಳು ಉಪಸ್ಥಿತರಿದ್ದರು.

ಕ್ಯಾಂಪ್ ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಸಭೆ

ಇನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿರುವ 14 ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಪಾಲಿಕೆಯ 12 ಹೆರಿಗೆ ಆಸ್ಪತ್ರೆಗಳನ್ನು ಸ್ಥಿರೀಕರಣ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಕೋವಿಡ್ ಆರೈಕೆ ಕೇಂದ್ರಗಳಲ್ಲಿ 531 ಹಾಸಿಗೆ ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಹಾಗೂ ಆಕ್ಸಿಜನ್ ಕಾನ್ಸನ್​​ಟ್ರೇಟರ್​ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ:ಖುಷಿ ಸುದ್ದಿ: ವಿಮೆ ಹಣ ಪಡೆಯಲು ನಿಯಮ ಸರಳೀಕರಿಸಿದ ಎಲ್​ಐಸಿ

ಬಿಬಿಎಂಪಿಯ 12 ಹೆರಿಗೆ ಆಸ್ಪತ್ರೆಗಳನ್ನು ಸ್ಥಿರೀಕರಣ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, ಕೇಂದ್ರಗಳಲ್ಲಿ 254 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಒಟ್ಟು 254 ಹಾಸಿಗೆಳ ಪೈಕಿ 240 ಹಾಸಿಗೆಗಳನ್ನು ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಈ ಪೈಕಿ ಈಗಾಗಲೇ 166 ಹಾಸಿಗೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಹಾಗೂ 15 ಹಾಸಿಗೆಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ಸೇರಿದಂತೆ 181 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಆಕ್ಸಿಜನ್ ವ್ಯವಸ್ಥೆ ಪಡೆಯುತ್ತಿದ್ದಾರೆ. 179 ಆಕ್ಸಿಜನ್ ಹಾಸಿಗೆಗಳು ಲಭ್ಯವಿದೆ.

ಕೋವಿಡ್ ಆರೈಕೆ ಕೇಂದ್ರಗಳು:ಬಿಬಿಎಂಪಿ ವ್ಯಾಪ್ತಿಯಲ್ಲಿ ಅಲ್ಪ ಮತ್ತು ಮಧ್ಯಮ ಪ್ರಮಾಣದ ಲಕ್ಷಣಗಳುಳ್ಳ ಸೋಂಕಿತರ ಚಿಕಿತ್ಸೆಗಾಗಿ ಮತ್ತು ಮನೆಯಲ್ಲಿ ಅಥವಾ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದವರಿಗಾಗಿ ಪಾಲಿಕೆ 8 ವಲಯಗಳಲ್ಲಿ 14 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲಾಗುತ್ತಿರುತ್ತದೆ. ಇದರಲ್ಲಿ ಒಟ್ಟು 2,064 ಹಾಸಿಗೆ ಸಾಮರ್ಥ್ಯ ಇದ್ದು, 410 ಹಾಸಿಗೆಗಳು ಭರ್ತಿಯಾಗಿವೆ.

ಕೋವಿಡ್ ಆರೈಕೆ ಕೇಂದ್ರಗಳಲ್ಲಿನ ಹಾಸಿಗೆಗಳ ಪೈಕಿ ಕನಿಷ್ಠ ಶೇ.20 ರಷ್ಟು ಆಕ್ಸಿಜನ್ ಸಹಿತ ಬೆಡ್‌ಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಸ್ತುತ 14 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 2,064 ಹಾಸಿಗೆಗಳ ಪೈಕಿ, 102 ಹಾಸಿಗೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಹಾಗೂ 248 ಹಾಸಿಗೆಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್​​​​ ವ್ಯವಸ್ಥೆ ಸೇರಿದಂತೆ ಸದ್ಯ ಒಟ್ಟು 350 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, 31 ಮಂದಿ ಆಕ್ಸಿಜನ್ ವ್ಯವಸ್ಥೆ ಪಡೆಯುತ್ತಿದ್ದಾರೆ. 319 ಆಕ್ಸಿಜನ್ ಹಾಸಿಗೆಗಳು ಲಭ್ಯವಿದೆ.

ABOUT THE AUTHOR

...view details