ಬೆಂಗಳೂರು:ನಗರದಲ್ಲಿ ನಾಳೆ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ಈಗಾಗಲೇ ಮಾರ್ಗಸೂಚಿಗಳನ್ನು ಪಾಲಿಕೆ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡಬಾರದು ಎಂಬ ಅಂಶವನ್ನೂ ಸ್ಪಷ್ಟಪಡಿಸಿದೆ. ಈ ಕುರಿತು ಇನ್ನಷ್ಟು ಮಾಹಿತಿ ನೀಡಿರುವ ಪಾಲಿಕೆ ನಿಯಮ ಪಾಲನೆ ಮಾಡಿ ಹಬ್ಬ ಆಚರಣೆ ಮಾಡಬೇಕು ಎಂದಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ನಗರದಲ್ಲಿ ಒಂಟೆ ರಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಗರ ಪಾಲಿಕೆ ಅಧಿಕಾರಿಗಳು ಅವರ ಜವಾಬ್ದಾರಿ ನಿರ್ವಹಣೆ ಮಾಡ್ತಾ ಇದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಮೀಸಲಿಟ್ಟಿರುವ ಬೆಡ್ ವಾಪಸ್ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಳೆದ ವಾರ ಪ್ರತಿನಿತ್ಯ 400- 500 ಪ್ರಕರಣಗಳು ವರದಿಯಾಗುತ್ತಿದ್ದವು. ಈ ವಾರ ನಗರದಲ್ಲಿ ಸೋಂಕಿನ ಪ್ರಕರಣ ಕಡಿಮೆಯಾಗ್ತಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆನೂ ಕಡಿಮೆಯಾಗ್ತಿದೆ.
ಪ್ರತಿ ದಿನ ಸರಾಸರಿ 30 ಮಂದಿ ಸೋಂಕಿತರು ಮಾತ್ರ ಸರ್ಕಾರಿ ಕೋಟಾದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸರ್ಕಾರಿ ಕೋಟಾದ ಹಾಸಿಗೆಗಳಲ್ಲಿ ಕೇವಲ 320 ರೋಗಿಗಳು ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೆಡ್ಗಳನ್ನು ಇಳಿಸಲು ಸರ್ಕಾರಕ್ಕೆ ಪ್ರಸ್ತಾವ
ಹೀಗಾಗಿ ಬೇರೆ ರೋಗಿಗಳಿಗೆ ಬೆಡ್ ಸಮಸ್ಯೆ ಆಗಬಾರದು. ಸದ್ಯ ಖಾಸಗಿ ಆಸ್ಪತ್ರೆಯ 5 ಸಾವಿರ ಬೆಡ್ಗಳನ್ನ ನಾವು ಪಡೆದಿದ್ದೇವೆ. ಅದರ ಸಂಖ್ಯೆಯ ಇಳಿಕೆಗೆ ಸರ್ಕಾರಕ್ಕೆ ಪ್ರಸ್ರಾವನೆ ಸಲ್ಲಿಸಲಾಗಿದೆ. 5 ಸಾವಿರದಿಂದ 1,800ಕ್ಕೆ ಬೆಡ್ಗಳನ್ನು ಇಳಿಸುವ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದರು.
ನಗರದಲ್ಲಿ ಹೋಂ ಐಸೋಲೇಷನ್ ಡೆತ್ ಆಡಿಟ್ ವಿಚಾರವಾಗಿ ಮಾತನಾಡಿದ ಅವರು ಡೆತ್ ಆಡಿಟ್ ವರದಿ ನನ್ನ ಕೈ ಸೇರಿದೆ. ತಜ್ಞರ ಜತೆ ಈ ಬಗ್ಗೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಮೂರನೇ ಅಲೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಪುತ್ರ ವಿಜಯೇಂದ್ರಗೆ ಭವಿಷ್ಯ ಕಲ್ಪಿಸಲು ತ್ಯಾಗ.. ಸ್ವಪ್ರೇರಣೆಯಿಂದ ಸಿಎಂ ಕುರ್ಚಿ ಬಿಡಲು ನಿರ್ಧರಿಸಿದರೇ ಬಿಎಸ್‌ವೈ!?
ಅನ್ಲಾಕ್ ಆಗಿದ್ದರೂ ನಮ್ಮಲ್ಲಿ ಟೆಸ್ಟಿಂಗ್ ಕಡಿಮೆಯಾಗಿಲ್ಲ. ದೆಹಲಿ, ಮುಂಬೈಗಿಂತ ಎರಡು ಪಟ್ಟು ನಾವೇ ಮಾಡ್ತಾ ಇದೀವಿ. ನಗರದ ಶೇಕಡಾ 15ರಷ್ಟು ಮಂದಿಗೆ ಸಂಪೂರ್ಣ ವ್ಯಾಕ್ಸಿನ್ ಹಾಕಲಾಗಿದೆ. ಮೂರನೇ ಅಲೆ ತಡೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಎರಡನೇ ಅಲೆಯಲ್ಲಿ ಆಗಿದ್ದ ಆಕ್ಸಿಜನ್ ಸಮಸ್ಯೆ ಆಗದಂತೆ, ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗ್ತಿದೆ ಎಂದರು.