ಕರ್ನಾಟಕ

karnataka

ETV Bharat / city

ಬೆಂಗಳೂರು: ಕುಸಿದ ಕಟ್ಟಡದ ಮಾಲೀಕರ ಬಂಧನ..ಕ್ರಿಮಿನಲ್ & ಸಿವಿಲ್ ತನಿಖೆ ನಡೆಯುತ್ತದೆ-ಗೌರವ್​​​ ಗುಪ್ತಾ

ಆಯೇಶಾ ಬೇಗ್ ಎಂಬುವರು ಕಟ್ಟಡದ ಓನರ್. ಇವರು ಆಸಿಫ್ ಇಬ್ರಾಹಿಂ ಜೊತೆ ಜಾಯಿಂಟ್ ವೆಂಚರ್​ನಲ್ಲಿ ಬಹು ಮನೆ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ಅನುಮತಿ ಪಡೆದದ್ದಿಕ್ಕಿಂತ ಹೆಚ್ಚು ಕಟ್ಟಿದ್ದಾರೆ. ಒಂದು ಕಾಲಂ ಡ್ಯಾಮೇಜ್ ಆಗಿರೋದು ಕಂಡು ಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಹೇಳಿದರು.

bbmp-commissioner-gaurav-gupta-statament-on-building-collapse
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ

By

Published : Oct 7, 2021, 10:02 PM IST

Updated : Oct 7, 2021, 10:28 PM IST

ಬೆಂಗಳೂರು:2012-13 ರಲ್ಲಿ ಕಟ್ಟಡಕ್ಕೆ ಅನುಮೋದನೆ ನೀಡಲಾಗಿತ್ತು. ಗ್ರೌಂಡ್ ಪ್ಲಸ್​-​2 ಕಟ್ಟಲು ಅನುಮತಿ ನೀಡಲಾಗಿತ್ತು. ಆದರೆ ಗ್ರೌಂಡ್​ ಪ್ಲಸ್-​​​​4 ನಿರ್ಮಾಣ ಮಾಡಲಾಗಿದೆ. ಸದ್ಯ ಕ್ರಿಮಿನಲ್​​ ಇನ್ವೆಸ್ಟಿಗೇಷನ್​ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಮಾಹಿತಿ ನೀಡಿದ್ದಾರೆ.

ಕಟ್ಟದ ಕುಸಿದ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಭೇಟಿ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಆಯೇಶಾ ಬೇಗ್ ಎಂಬುವರು ಕಟ್ಟಡದ ಓನರ್. ಇವರು ಆಸಿಫ್ ಇಬ್ರಾಹಿಂ ಜೊತೆ ಜಾಯಿಂಟ್ ವೆಂಚರ್​ನಲ್ಲಿ ಬಹು ಮನೆ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ಅನುಮತಿ ಪಡೆದದ್ದಕ್ಕಿಂತ ಹೆಚ್ಚು ಕಟ್ಟಿದ್ದಾರೆ.

ಒಂದು ಕಾಲಂ ಡ್ಯಾಮೇಜ್ ಆಗಿರೋದು ಕಂಡು ಬಂದಿದೆ. ಹೆಚ್ಚುವರಿ ಫ್ಲೋರ್ ಕಟ್ಟಿರೋದು ಕಂಡು ಬಂದಿದೆ. ಅನ್ ಸೇಫ್ ಆಗಿ ಕಟ್ಟಿರೋರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಅಧಿಕಾರಿಗಳ ತಪ್ಪಿದ್ರೂ ನಾವು ಅವರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನು ಓದಿ-Live Video: ಬೆಂಗಳೂರಿನಲ್ಲಿ ಮತ್ತೊಂದು ಅವಘಡ.. ಐದು ಅಂತಸ್ತಿನ ಅಪಾರ್ಟ್​ಮೆಂಟ್​​ ಕುಸಿತ

ಈ ಬಗ್ಗೆ ಕ್ರಿಮಿನಲ್, ಹಾಗೂ ಸಿವಿಲ್ ತನಿಖೆ ನಡೆಸಲಾಗುತ್ತದೆ. ಸಾಯಿಲ್ ಟೆಸ್ಟ್ ಮಾಡಬೇಕಾಗುತ್ತೆ. ಬಿಲ್ಡಿಂಗ್ ಕಂಟ್ರ್ಯಾಕ್ಟರ್ ಜವಾಬ್ದಾರಿ ಹೆಚ್ವಿದೆ. ಸಾಯಿಲ್ ಬೇರಿಂಗ್ ಕ್ಯಾಪಾಸಿಟಿಗಿಂತ ಜಾಸ್ತಿ ಕಟ್ಟಿದ್ದಾರೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಮನೆ ಮಾಲೀಕರನ್ನು ಬಂಧಿಸಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.‌

56 ಲಕ್ಷ ಕೊಟ್ಟು ಪ್ಲಾಟ್​ ಖರೀದಿಸಿದ್ದೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ಲಾಟ್​​ನ ಮಾಲೀಕ ಆರೀಫ್, ಬೇಗ್ ಮತ್ತು ಆಸೀಪ್ ಬಿಲ್ಡಿಂಗ್ ಮಾಲೀಕರು. ಎನ್​ಒಸಿ ಪಡೆಯದೇ ಕಟ್ಟಡ ಕಟ್ಟಿದ್ರು. ಎರಡು ಪ್ಲೋರ್ ಮೇಲೆ ಮತ್ತೆ ಇನ್ನೆರಡು ಪ್ಲೋರ್ ಕಟ್ಟಿದ್ರು. ಓವರ್ ಪ್ಲೋರ್ ನಿಂದಾಗಿ ಬಿಲ್ಡಿಂಗ್ ಕುಸಿದಿದೆ. ಬ್ಯಾಂಕ್ ನಿಂದ 56 ಲಕ್ಷ ಲೋನ್ ಪಡೆದು ಫ್ಲಾಟ್ ಖರೀದಿ ಮಾಡಿದ್ವಿ.

ಕಳೆದ ವರ್ಷ ಮಾರ್ಚ್​ನಲ್ಲಿ ಬಿಬಿಎಂಪಿಗೆ ದೂರು ನೀಡಿದ್ದೆವು. ಆಗ ಯಾರೊಬ್ಬರು ಬಂದು ವಿಚಾರಿಸಲಿಲ್ಲ. ಇವತ್ತು ಬಂದು ಎನ್​ಒಸಿ ತಗೊಂಡಿಲ್ಲ ಅಂತ ಅಧಿಕಾರಿಗಳು ಹೇಳ್ತಾರೆ. ಲೋನ್ ಸಾಲ ಕೂಡ ತೀರಿಲ್ಲ ಅದಕ್ಕೂ ಮೊದಲೇ ಬಿಲ್ಡಿಂಗ್ ಕೊಲಾಪ್ಸ್ ಆಗಿದೆ ಎಂದು ನೋವು ತೋಡಿಕೊಂಡರು. ಇನ್ನು ಮೂರು ಅಂತಸ್ತಿನ ಕಟ್ಟಡದಲ್ಲಿ 8 ಮನೆಗಳಿವೆ.

Last Updated : Oct 7, 2021, 10:28 PM IST

ABOUT THE AUTHOR

...view details