ಬೆಂಗಳೂರು :ನಗರದಲ್ಲಿ ಒಮಿಕ್ರಾನ್ ವೈರಸ್ ಪತ್ತೆ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್ ಆಗಿದೆ. ಒಮಿಕ್ರಾನ್ ಸೋಂಕಿತ ವೈದ್ಯ ಕಾನ್ಫರೆನ್ಸ್ವೊಂದರಲ್ಲಿ ಭಾಗಿಯಾಗಿದ್ರು.
ಹೀಗಾಗಿ, ಆ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೂ ಬಿಬಿಎಂಪಿ ಟೆಸ್ಟಿಂಗ್ ಮಾಡಿದೆ. ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ನಲ್ಲಿ ಕಳೆದ ನ.19, 20 ಹಾಗೂ 21 ರಂದು ಕಾನ್ಫರೆನ್ಸ್ ನಡೆದಿತ್ತು. ಈ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ ಹೋಟೆಲ್ನ ಸುಮಾರು 35 ಮಂದಿಯ ಸ್ಯಾಂಪಲ್ ಸಂಗ್ರಹಿಸಲಾಗಿದೆ.