ಬೆಂಗಳೂರು:ಸ್ವಚ್ಛತೆ ಕಾಪಾಡದೆ ಬೇಕಾಬಿಟ್ಟಿ ಆಹಾರ ತಯಾರಿಸುತ್ತಿದ್ದ 13 ಹೋಟೆಲ್ಗಳಿಗೆ ಬಿಬಿಎಂಪಿ ಬೀಗ ಜಡಿದಿದೆ. ಕೊರೊನಾ, ಕಾಲರಾ ಭೀತಿ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ನಗರದ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.
ಕೊರೊನಾ, ಕಾಲರಾ ಭೀತಿ: ಸ್ವಚ್ಛತೆ ಕಾಪಾಡದ 13 ಹೋಟೆಲ್ಗಳಿಗೆ ಬೀಗ ಜಡಿದ ಬಿಬಿಎಂಪಿ
ಬೆಂಗಳೂರಿನಲ್ಲಿ ಕೊರೊನಾ, ಕಾಲರಾ ಭೀತಿ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸ್ವಚ್ಛತೆ ಕಾಪಾಡದ 13 ಹೋಟೆಲ್ಗಳನ್ನು ಮುಚ್ಚಿಸಿದ್ದಾರೆ.
hotel
ನಗರದ ವಿವಿ ಪುರಂ ಫುಡ್ ಸ್ಟ್ರೀಟ್ನ 13 ಹೋಟೆಲ್ಗಳಿಗೆ ಬೀಗ ಜಡಿಯಲಾಗಿದೆ. ಕಿಚನ್ ಹಾಗೂ ಸರ್ವೀಸ್ ಹಾಲ್ಗಳಲ್ಲಿ ಸ್ವಚ್ಛತೆ ಕೊರತೆ ಕಾರಣಕ್ಕೆ ಬೀಗ ಹಾಕಿಸಲಾಗಿದೆ. ನಗರದ ಪೂರ್ವ ವಲಯದ ಆರೋಗ್ಯಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಗಿದೆ. ಸ್ವಚ್ಛತೆ ಕಾಪಾಡದ ಹೋಟೆಲ್ಗಳಿಗೆ ಸುಮಾರು 65 ಸಾವಿರ ದಂಡ ವಿಧಿಸಲಾಗಿದೆ. ಈ ವೇಳೆ 23 ಹೋಟೆಲ್ಗಳ ತಪಸಾಣೆ ಮಾಡಲಾಗಿದೆ.
ಇನ್ನು ಮಾರ್ಷಲ್ಗಳ ಸಹಾಯದಿಂದ ಅನಧಿಕೃತವಾಗಿ ನಡೆಯುತ್ತಿದ್ದ ಕೋಳಿ ಅಂಗಡಿ, ಮಾಂಸದ ಅಂಗಡಿಗಳನ್ನೂ ಮುಚ್ಚಿಸಲಾಗಿದೆ. ಬೀದಿ ಬದಿಯ ಅಂಗಡಿಗಳಿಗೂ ನಿಷೇಧ ಹೇರಲಾಗಿದೆ.