ಬೆಂಗಳೂರು: ಪಾಲಿಕೆ ಮುಖ್ಯ ಕಾರ್ಯದರ್ಶಿ ನಿನ್ನೆ ಪೂರ್ವ ವಲಯದ ವಾರ್ ರೂಂ ಗೆ ಭೇಟಿ ನೀಡಿದ್ದರು. ವಾರ್ ರೂಂ ಕಾರ್ಯ ಚಟುವಟಿಕೆಗಳ ಟೆಸ್ಟಿಂಗ್, ಆಸ್ಪತ್ರೆಗಳ ಹಾಸಿಗೆ ಒದಗಿಸುವ ವ್ಯವಸ್ಥೆ, ಆಂಬ್ಯುಲೆನ್ಸ್ ಸೇವೆ, ಹೋಂ ಐಸೋಲೇಷನ್, ಕಾಂಟ್ಯಾಕ್ಟ್ ಟ್ರೇಸಿಂಗ್‌ಗಳು ಹಾಗೂ ಹೆಲ್ಪ್ ಲೈನ್ ಸೇವೆಯ ಪ್ರತಿ ದೂರವಾಣಿ ಕರೆ ಸ್ವೀಕರಿಸಿದ ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ಒದಗಿಸುವ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದ್ರು. ಪರಿಶೀಲಿನೆ ನಂತರ ಸದರಿ ಹೆಲ್ಪ್‌ಲೈನ್‌ಗಳ ಸಂಖ್ಯೆ ಹಾಗೂ ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಪಾಲಿಕೆ ಮುಖ್ಯ ಕಾರ್ಯದರ್ಶಿಯಿಂದ ಹಿರಿಯ ಅಧಿಕಾರಿಗಳ ಸಭೆ
ಪಾಲಿಕೆ ಮುಖ್ಯ ಕಾರ್ಯದರ್ಶಿ ಅವರು ನಿನ್ನೆ ಪರಿಶೀಲನೆ ನಡೆಸಿದ ನಂತರ ಹಿರಿಯ ಅಧಿಕಾರಿಗಳೂಂದಿಗೆ ಸಭೆ ನಡೆಸಿದರು. ಈಗಿರುವ ಆಸ್ಪತ್ರೆಗಳಲ್ಲಿರುವ ಹಾಸಿಗೆ ಸೌಲಭ್ಯ ಹೆಚ್ಚಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ವೆಂಟಿಲೆಟರ್ ಸೌಲಭ್ಯವುಳ್ಳ ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ಹಾಗೂ ಅಗತ್ಯ ಸೌಲಭ್ಯ ಇರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಹಾಸಿಗೆ ವ್ಯವಸ್ಥೆಗೊಳಿಸಲು ಸೂಚಿಸಿದರು. ಅಲ್ಲದೆ ಸಿ.ಎಸ್.ಐ ಸಂಸ್ಥೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ಥಳ ಒದಗಿಸಲು ಮುಂದೆ ಬಂದಿದ್ದು, ಸದರಿ ಸ್ಥಳದಲ್ಲಿ ಕೂಡಲೇ ಹಾಸಿಗೆ ಇನ್ನಿತರೆ ವ್ಯವಸ್ಥೆಗೊಳಿಸಲು ಹೇಳಿದರು. ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಎಲ್ಲಾ ಕೊವೀಡ್ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ 10 ರಷ್ಟು ಅಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.