ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿನ ಸಮಸ್ಯೆ ಪರಿಶೀಲನೆಗೆ ರಸ್ತೆಗಿಳಿದ ಬಿಬಿಎಂಪಿ ಮುಖ್ಯ ಆಯುಕ್ತರು - ತಕ್ಷಣ ಸಮಸ್ಯೆ ನಿವಾರಣೆಗೆ ಆಯುಕ್ತ ಆದೇಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿ ಬರುವ ಪ್ರದೇಶವನ್ನು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಬೆಳಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಕಾಲ್ನಡಿಗೆ ಮೂಲಕ ಪರಿಶೀಲಿಸಿದರು. ನಗರದ ಹೊರ ವರ್ತುಲ ರಸ್ತೆ ಹೆಣ್ಣೂರು ಮೇಲ್ಸೇತುವೆಯಿಂದ ಕಮ್ಮನಹಳ್ಳಿಯವರೆಗೆ ಸುಮಾರು 9 ಕಿ.ಮೀ.ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ತೆರಳಿದ ಆಯಕ್ತರು, ಸ್ಥಳೀಯ ಸಮಸ್ಯೆಗಳನ್ನು ವೀಕ್ಷಣೆ ಮಾಡಿ ತಕ್ಷಣ ನಿವಾರಣೆಗೆ ಸೂಚಿಸಿದರು.

BBMP_CHIEF_COMISSIONER_TUSHAR_
ಬಿಬಿಎಂಪಿ ಆಯುಕ್ತರು ತುಷಾರ್ ಗಿರಿನಾಥ್

By

Published : Oct 17, 2022, 5:26 PM IST

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿ ಬರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಬೆಳಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಜತೆಗೂಡಿ ಕಾಲ್ನಡಿಗೆಯ ಮೂಲಕ ಪರಿಶೀಲನೆ ನಡೆಸಿದರು. ನಗರದ ಹೊರ ವರ್ತುಲ ರಸ್ತೆ ಹೆಣ್ಣೂರು ಮೇಲ್ಸೇತುವೆಯಿಂದ ಕಮ್ಮನಹಳ್ಳಿಯವರೆಗೆ 9 ಕಿ.ಮೀ ಗೂ ಹೆಚ್ಚು ದೂರ ಕಾಲ್ನಡಿಗೆ ಮೂಲಕ ಕ್ರಮಿಸಿ ಸಮಸ್ಯೆಗಳನ್ನು ಖುದ್ದು ತಾವೇ ಪರಿಶೀಲಿಸಿದರು.

ಪ್ರಮಖವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ, ನೇತಾಡುವಂತಹ ಒ.ಎಫ್.ಸಿ ಕೇಬಲ್, ರಸ್ತೆ ಬದಿಯ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳ, ಪಾದಚಾರಿ ಮಾರ್ಗಗಳ ಒತ್ತುವರಿ, ಪಾದಚಾರಿ ಮಾರ್ಗಗಳಲ್ಲಿ ನಿಲುಗಡೆ ಮಾಡಿರುವ ಮತ್ತು ರಸ್ತೆ ಬದಿಗಳಲ್ಲಿ ನಿಲ್ಲಿಸಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ವೀಕ್ಷಿಸಿದ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮರದ ಕೊಂಬೆಗಳನ್ನು ಕಟಾವು ಮಾಡುವುದು ಸೇರಿದಂತೆ ಬೀದಿ ದೀಪಗಳನ್ನು ಅಳವಡಿಸುವುದು, ರಸ್ತೆ ಬದಿಯ ಚರಂಡಿಗಳಿಗೆ ಅಳವಡಿಸಿರುವ ಸ್ಲ್ಯಾಬ್ ಹಾಳಾಗಿರುವುದು, ಶೋಲ್ಡರ್ ಡ್ರೈನ್ ಗಳಲ್ಲಿ ಶುಚಿತ್ವ ಕಾಪಾಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಿಶೀಲಿಸಿದ ಅವರು, ತ್ವರಿತವಾಗಿ ಬಗೆಹರಿಸಲು ತಿಳಿಸಿದರು.

ಹೆಣ್ಣೂರು ಭಾಗದ ತ್ಯಾಜ್ಯದ ಸಮಸ್ಯೆ ನಿವಾರಿಸಿ :ಹೆಣ್ಣೂರು ಭಾಗದಲ್ಲಿರುವ ತ್ಯಾಜ್ಯವನ್ನು ಕೂಡಲೇ ತೆಗೆಯಬೇಕು. ಮೇಲ್ಸೇತುವೆಯ ಜಂಕ್ಷನ್ ನಲ್ಲಿ ರಸ್ತೆ ದುರಸ್ತಿ ಕಾರ್ಯ ಕೂಡಲೇ ಮಾಡಬೇಕು. ಈ ಪೈಕಿ ಮಳೆ ನಿಂತ ಕೂಡಲೇ ದುರಸ್ತಿಕಾರ್ಯ ಕೈಗೊಳ್ಳಬೇಕು. ಹೊರ ವರ್ತುಲ ರಸ್ತೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ರಸ್ತೆ ಬದಿ ಮರದ ಕೊಂಬೆಗಳನ್ನು ಕಟಾವು ಮಾಡಬೇಕು, ನೇತಾಡುವಂತಹ ಒಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಬೇಕು. ಈ ಸಂಬಂಧ ನಗರದ ಹೊರ ವರ್ತುಲ ರಸ್ತೆಗಳನ್ನು ವಾರ್ಷಿಕ ನಿರ್ವಹಣೆಗೆ ಗುತ್ತಿಗೆ ನೀಡಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಹೇಳಿದರು.

ಮುಖ್ಯ ರಸ್ತೆಗುಂಡಿಗಳನ್ನು ಮುಚ್ಚಿ:ಹೆಣ್ಣೂರು ಫ್ಲೈ ಓವರ್ ನಿಂದ ಲಿಂಗರಾಜಪುರದ ಕಡೆಗೆ ಹೋಗುವ ಮುಖ್ಯ ರಸ್ತೆಯನ್ನು ಪರಿಶೀಲಿಸಿದ ಅವರು, ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಬದಿಯಿರುವ ತ್ಯಾಜ್ಯ ಕಟ್ಟಡ ಭಗ್ನಾವಶೇಷಗಳನ್ನು ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಹಾಗೂ ಪೌರಕಾರ್ಮಿಕರನ್ನು ಬಳಸಿಕೊಂಡು ತೆರವುಗೊಳಿಸಬೇಕು. ನೇತಾಡುವ ಒ.ಎಫ್.ಸಿ ಕೇಬಲ್ ಹಾಗೂ ಮುಖ್ಯ ರಸ್ತೆ ಬದಿಯ ಅಂಗಡಿಗಳ ಮುಂಭಾಗ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ABOUT THE AUTHOR

...view details