ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ಅವೈಜ್ಞಾನಿಕವಾಗಿದ್ದು, ಕೊರೊನಾ ಸಂಕಷ್ಟದ ಹಿನ್ನೆಲೆ ಪಾಲಿಕೆಯ ಆದಾಯಕ್ಕಿಂತ ವೆಚ್ಚ ಹೆಚ್ಚಾಗಬಾರದೆಂದು ಬಜೆಟ್ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗಿದೆ.
ಅವೈಜ್ಞಾನಿಕ ಬಜೆಟ್ನ್ನು ಪರಿಷ್ಕರಣೆ ಮಾಡ್ತಾರಾ ಬಿಬಿಎಂಪಿ ಅಡ್ಮಿನಿಸ್ಟ್ರೇಟರ್!?
ಈ ಬಗ್ಗೆ ಅ.5ರಂದು ಆಡಳಿತಗಾರರಾದ ಗೌರವ್ ಗುಪ್ತಾ ತುರ್ತು ಸಭೆ ಕರೆದಿದ್ದಾರೆ. ಪಾಲಿಕೆಗೆ ಆಡಳಿತಗಾರರ ನೇಮಕವಾದ ದಿನದಿಂದಲೂ ಆದಾಯ ಕ್ರೋಢೀಕರಣ ಹಾಗೂ ಖರ್ಚು ವೆಚ್ಚ ಕಡಿತ ಮಾಡುವ ಬಗ್ಗೆ ಹಲವಾರು ಸಭೆಗಳನ್ನು ನಡೆಸಿದ್ದ ಗೌರವ್ ಗುಪ್ತಾ ಈ ಬಗ್ಗೆ ಸುಳಿವು ನೀಡಿದ್ದರು.
ಈ ಬಗ್ಗೆ ಅ.5ರಂದು ಆಡಳಿತಗಾರರಾದ ಗೌರವ್ ಗುಪ್ತಾ ತುರ್ತು ಸಭೆ ಕರೆದಿದ್ದಾರೆ. ಪಾಲಿಕೆಗೆ ಆಡಳಿತಗಾರರ ನೇಮಕವಾದ ದಿನದಿಂದಲೂ ಆದಾಯ ಕ್ರೋಢೀಕರಣ ಹಾಗೂ ಖರ್ಚು ವೆಚ್ಚ ಕಡಿತ ಮಾಡುವ ಬಗ್ಗೆ ಹಲವಾರು ಸಭೆಗಳನ್ನು ನಡೆಸಿದ್ದ ಗೌರವ್ ಗುಪ್ತಾ ಈ ಬಗ್ಗೆ ಸುಳಿವು ನೀಡಿದ್ದರು. ಇದೀಗ ಅ.5 ರಂದು ವಿವಿಧ ಅಧಿಕಾರಿಗಳ ಸಭೆ ಕರೆದಿರುವ ಗೌರವ್ ಗುಪ್ತಾ, ಪ್ರತಿ ವಿಭಾಗಗಳ ಆದಾಯ ಹಾಗೂ ವೆಚ್ಚದ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿಯ 11,969.5 ಕೋಟಿ ರೂ. ಮೊತ್ತದ ಬಜೆಟ್ ಪೈಕಿ, 11,715.2 ಕೋಟಿ ರೂಪಾಯಿಯ ಬಜೆಟ್ಗೆ ಸರ್ಕಾರ ಅನುಮೋದನೆ ನೀಡಿತ್ತು. ಇದೀಗ ಕೊರೊನಾ ಸಂಕಷ್ಟದ ಹಿನ್ನಲೆ ಬಜೆಟ್ ಮೊತ್ತ ಪರಿಷ್ಕರಣೆಯಾಗಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.