ಬೆಂಗಳೂರು: ಹಲವು ಹಳೇ ಯೋಜನೆಗಳ ಕಡಿತದೊಂದಿಗೆ ಹೊಸ ಬೆರಳೆಣಿಕೆಯ ಯೋಜನೆಗಳನ್ನು ಹೊತ್ತು ಬಿಬಿಎಂಪಿಯು ಇಂದು ಬಜೆಟ್ ಮಂಡಿಸಿದೆ.
ಪಿಂಕ್ ಬೇಬಿ, ಇಂದಿರಾ ಕ್ಯಾಂಟೀನ್ ಯೋಜನೆಗಳಿಗೆ ಹಣಕಾಸು ಮೀಸಲಿಡಲಾಗಿದೆ. ಉಚಿತ ಕಾವೇರಿ ನೀರು, ನಗರದ ಪ್ರಮುಖ ದ್ವಾರಗಳಿಗೆ ಕೆಂಪೇಗೌಡರ ಸ್ವಾಗತ ಕಮಾನು ಮೊದಲಾದ ಹೊಸ ಯೋಜನೆ ಘೋಷಿಸಿದೆ. ಇನ್ನು ಕೊರೊನಾ ತಡೆಗಟ್ಟಲು ಪ್ರತಿ ವಾರ್ಡ್‌ಗೆ 25 ಲಕ್ಷದಂತೆ, 49.50 ಕೋಟಿ ರೂಪಾಯಿ ಮುಖ್ಯಮಂತ್ರಿಗಳ ಕೊರೊನಾ ವಿಪತ್ತು ನಿಧಿಗೆ ವರ್ಗಾಯಿಸಿದೆ. ಕೊರೊನಾ ತುರ್ತು ಪರಿಸ್ಥಿತಿಯಲ್ಲೂ ಸ್ವಚ್ಛತೆಗಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಕಲ್ಯಾಣಕ್ಕೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಟ್ಟಿದೆ. ನಗರದಲ್ಲಿ ಹತ್ತು ಸಾವಿರ ಲೀಟರ್ ನೀರಿಗಿಂತ ಕಡಿಮೆ ಬಳಕೆ ಮಾಡುವ ಗೃಹಪಯೋಗಿ ಬಳಕೆದಾರರಿಗೆ ಒಂದು ವರ್ಷ ಉಚಿತ ಕಾವೇರಿ ನೀರು ನೀಡಲು ಪಾಲಿಕೆ 43 ಕೋಟಿ ಮೊತ್ತದ ಯೋಜನೆ ರೂಪಿಸಿದ್ದು, ಎರಡೂವರೆ ಲಕ್ಷ ಕುಟುಂಬಗಳಿಗೆ ಸಹಾಯವಾಗಲಿದೆ.
ಬಿಬಿಎಂಪಿ ಬಜೆಟ್ ಹೈಲೈಟ್ಸ್ ಹೀಗಿದೆ:
ಬಜೆಟ್ ಗಾತ್ರ ಒಟ್ಟು 10,899.23 ಕೋಟಿ ರೂ.ಗಳು
ಆಡಳಿತ ವಿಭಾಗ:
ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 938 ಹುದ್ದೆಗಳ ನೇಮಕ, ಪಾಲಿಕೆಯ ಖಾಯಂ ಮತ್ತು ನಿವೃತ್ತ ಅಧಿಕಾರಿ/ನೌಕರರ ಕುಟಂಬದವರಿಗೆ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ವಿಮೆ, ಲೆಕ್ಕಪತ್ರಗಳ ನಿರ್ವಹಣೆಗೆ “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯವ್ಯಯ ಮತ್ತು ಲೆಕ್ಕಪತ್ರ ನಿಯಮಾವಳಿಗಳು-2020" ರಚನೆ.
ಸಂಪನ್ಮೂಲ ಸುಧಾರಣೆ ಕ್ರಮಗಳು:
ಹೊಸ ವಲಯಗಳಲ್ಲಿನ ಆಸ್ತಿಗಳ ಖಾತೆ ನಕಲು ಮತ್ತು ಖಾತೆ ದೃಢೀಕರಣ ಪತ್ರಗಳನ್ನು ಗಣಕೀಕರಣ ಮಾಡುವುದು, ಖಾತೆ ನಕಲು ಮತ್ತು ಖಾತೆ ದೃಢೀಕರಣ ಶುಲ್ಕ ದ್ವಿಗುಣ, 3 ವರ್ಷಕ್ಕೂ ಹೆಚ್ಚು ಆಸ್ತಿ ತೆರಿಗೆ ಬಾಕಿ ವಿವರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಯ ಋಣಭಾರ ಪತ್ರದಲ್ಲಿ ನಮೂದನೆಗೆ ಕ್ರಮ, ಬಾಕಿ ಇರುವ ಸುಧಾರಣಾ ಶುಲ್ಕ ಅಂದಾಜು ರೂ.300 ಕೋಟಿ ವಸೂಲಾತಿಗೆ ಕ್ರಮ, ಉದ್ದಿಮೆ ಪರವಾನಗಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗುವುದು, ನಗರದಲ್ಲಿರುವ ಹೋಟೆಲ್‌ಗಳನ್ನು ಎ, ಬಿ, ಸಿ, ಡಿ ಮಾದರಿಯಲ್ಲಿ ವರ್ಗೀಕರಣ ಗೊಳಿಸಲಾಗುವುದು.
ಕಾರ್ಯಕ್ರಮಗಳು:
1)ಶೇ.24.10% ಅನುದಾನದ ಕಾರ್ಯಕ್ರಮಗಳಿಗೆ ರೂ.361.34 ಕೋಟಿ,
2) ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.108.42 ಕೋಟಿ
3)ವಿಶೇಷ ಚೇತನ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.74,90 ಮೀಸಲು
4)ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.9.9 ಕೋಟಿ
5) 10,000 ಲೀಟರ್‌ವರೆಗೆ “ಉಚಿತ ಕಾವೇರಿ ನೀರು ಕಾರ್ಯಕ್ರಮಕ್ಕೆ ರೂ. 43.00 ಕೋಟಿ ಮೀಸಲು
6) ಸಾಮಾನ್ಯ ವರ್ಗದವರು ವೈಯಕ್ತಿಕ ಮನೆಗೆ ರೂ.15 ಕೋಟಿ
7) ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ರೂ.1.50 ಕೋಟಿ
8) ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.5 ಕೋಟಿ ಅನುದಾನ ಒದಗಿಸಲಾಗಿದೆ
9) ದಿ. ಅನಂತಕುಮಾರ್ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರತಿವಾರ್ಡ್ ಗೆ 15 ಲ್ಯಾಪ್ ಟಾಪ್ ವಿತರಣೆ. 15 ಕೋಟಿ ರೂ. ಮೀಸಲು
10) ನಿರಾಶ್ರಿತರಿಗೆ ರಾತ್ರಿ ತಂಗುದಾಣ ನಿರ್ಮಿಸಲು ರೂ. 5 ಕೋಟಿ
11) ಮಂಗಳಮುಖಿಯರ ಕಾರ್ಯಕ್ರಮಕ್ಕೆ ರೂ. 1.00 ಕೋಟಿ
12) ಪ್ರತಿ ವಾರ್ಡ್‌ಗೆ 50 ಟೈಲರಿಂಗ್ ಯಂತ್ರ ವಿತರಣೆಗೆ ರೂ.4 ಕೋಟಿ
13) “ಹೊಸ ಬೆಳಕು ಕಾರ್ಯಕ್ರಮ, 75 ವರ್ಷಕ್ಕೂ ಮೀರಿದ ಕನ್ನಡಪರ ಹೋರಾಟಗಾರರು ಮತ್ತು ಅಶಕ್ತ ಕನ್ನಡ ಕಲಾವಿದರು ಅರ್ಹ 100 ಜನರಿಗೆ ತಲಾ ರೂ.1 ಲಕ್ಷಗಳ ಆರ್ಥಿಕ ಸಹಾಯ
14) “ಅಂಗಳ” ಕಾರ್ಯಕ್ರಮ, ಕ್ರೀಡೆಗಳ ಪ್ರೋತ್ಸಾಹಕ್ಕೆ ರೂ.1.98 ಕೋಟಿ
15) ಪ್ರತಿಭಾವಂತ ಕ್ರೀಡಾ ಪಟುಗಳಿಗೆ ಆರ್ಥಿಕ ಸಹಾಯಕ್ಕೆ ರೂ.50 ಲಕ್ಷ ಅನುದಾನ
16) ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪತ್ರಕರ್ತರಿಗೆ ಅಪಘಾತ ವಿಮೆ ಜಾರಿಗೆ ರೂ.15 ಲಕ್ಷ ಅನುದಾನ
17) ಕನ್ನಡ ಪತ್ರಿಕೋಧ್ಯಮ ಉಳಿಸಿ ಬೆಳೆಸುವ ಸದುದ್ದೇಶದಿಂದ, ಪ್ರತಿ ವಾರ್ಡ್‌ನ ಆಯ್ದ ಸ್ಥಳಗಳಲ್ಲಿ ಒಂದು ಪತ್ರಿಕೆ ಮಾರಾಟ ಮಳಿಗೆಯನ್ನು ಹೊಂದಲು ಅವಕಾಶ ರೂ.1 ಕೋಟಿ ಅನುದಾನ
18 ದಿನಪತ್ರಿಕೆಗಳನ್ನು ಮತ್ತು ಹಾಲನ್ನು ವಿತರಿಸುವ ಹುಡುಗರಿಗೆ ಗುಂಪು ಆರೋಗ್ಯ ವಿಮೆ ಜಾರಿಗೆ ರೂ.70 ಲಕ್ಷ ಅನುದಾನ
ಶಿಕ್ಷಣ ವಿಭಾಗ:
1)ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ “ಸ್ಮಾರ್ಟ್ ಶಿಕ್ಷಣ” ಪ್ರಾರಂಭಕ್ಕೆ ರೂ.10 ಕೋಟಿ ಮೀಸಲು
2) “ಜ್ಞಾನದೀಪ” ಕಾರ್ಯಕ್ರಮಕ್ಕೆ ರೂ.75.00 ಲಕ್ಷ
3)“ನಾಡಪ್ರಭು ಕೆಂಪೇಗೌಡರವರ ಹೆಸರಿನಲ್ಲಿ ಹೊಸ ವಲಯಗಳಲ್ಲಿ ಹೊಸದಾಗಿ ಶಾಲೆ ನಿರ್ಮಾಣಕ್ಕೆ ರೂ.10.00 ಕೋಟಿ ಮೀಸಲು
4) ವಿದ್ಯಾರ್ಥಿಗಳಿಗೆ ಬಿ.ಎಂ.ಟಿ.ಸಿ.ಯ ಉಚಿತ ಬಸ್ ಪಾಸ್ ಕಾರ್ಯಕ್ರಮಕ್ಕೆ ರೂ.75.00 ಲಕ್ಷ ಮೀಸಲು
5) ಸಿ.ಸಿ.ಕ್ಯಾಮರಾವನ್ನು ಅಳವಡಿಸಲು 5 ಕೋಟಿ ಮೀಸಲು
6) ಶಾಲಾ ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ರೂ.2.00 ಕೋಟಿ ಮೀಸಲು