ಬೆಂಗಳೂರು :ಕೆಪಿಎಸ್‌ಸಿ, ಪಿಎಸ್ಐ, ಕೆಎಸ್‌ಪಿಪಿಸಿಬಿಯಲ್ಲಿ ನೇಮಕಾತಿಗೆ ಕೋಟ್ಯಂತರ ರೂಪಾಯಿ ಹಣ ನೀಡಬೇಕಾಗುತ್ತದೆ ಎಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಆಧರಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗೆ ದೂರು ನೀಡಿದೆ.
ವಿಜಯಪುರ ಜಿಲ್ಲೆಯ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಕೆಪಿಎಸ್‌ಸಿ, ಪಿಎಸ್ಐ, ಕೆಎಸ್‌ಪಿಪಿಸಿಬಿಯಲ್ಲಿ ನೇಮಕಾತಿಗೆ ಕೋಟ್ಯಂತರ ರೂಪಾಯಿ ಹಣ ನೀಡಬೇಕಾಗುತ್ತದೆ ಎಂದಿದ್ದು, 'ಅವರ ಬಳಿ ದಾಖಲೆಗಳಿರುವುದರಿಂದಲೇ ಈ ರೀತಿಯ ಹೇಳಿಕೆ ನೀಡಿದ್ದಾರೆ.