ಆನೇಕಲ್: ಹಿಂದಿನಿಂದಲೂ ಸುಗ್ಗಿಯ ಕಾಲದಲ್ಲಿ ಹಬ್ಬ ಆಚರಣೆಗಳನ್ನು ಅದ್ಧೂರಿಯಾಗಿ ರೈತಾಪಿ ವರ್ಗ ಆಚರಿಸಿಕೊಂಡು ಬರುತ್ತಿರುವುದು ವಾಡಿಕೆ. ಹಾಗಾಗಿಯೇ ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿಯಲ್ಲಿ ನಿನ್ನೆ ಬಯಲು ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ರೈತರು ಅದ್ಧೂರಿಯಾಗಿ ಆಚರಿಸಿದರು.
ನಿಮ್ಗೇ ರಾಗಿ ಮುದ್ದೆ ಮಾಡೋಕ್ ಬರೋಲ್ವಾ,, ಅದರಲ್ಲೇನಿದೇರಿ ಇಷ್ಟೇರೀ.. - Anekal Basaveshwara swamy fest
ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿಯಲ್ಲಿ ನಿನ್ನೆ ಬಯಲು ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ರೈತರು ಅದ್ಧೂರಿಯಾಗಿ ಆಚರಿಸಿದರು.
![ನಿಮ್ಗೇ ರಾಗಿ ಮುದ್ದೆ ಮಾಡೋಕ್ ಬರೋಲ್ವಾ,, ಅದರಲ್ಲೇನಿದೇರಿ ಇಷ್ಟೇರೀ..](https://etvbharatimages.akamaized.net/etvbharat/prod-images/768-512-4789500-thumbnail-3x2-lek.jpg)
ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ..
ಪ್ರತಿ ವರ್ಷ ರಾಗಿ ಮುದ್ದೆ, ಕಾಳು ಸಾಂಬರ್ ತಯಾರಿಸುವುದು ಜಾತ್ರೆಯ ವಿಶೇಷ. ಹಾಗಾಗಿ ರಾಗಿ ಮುದ್ದೆ ಮಾಡುವಾಗ ಹಾಡುಗಾರರಿಂದ ಸಂಗೀತ ಆಯೋಜನೆ ಮಾಡಲಾಗಿರುತ್ತೆ. ಸುತ್ತಮುತ್ತಲಿನ ಹತ್ತುಹಳ್ಳಿ ದೇವರ ಮೆರವಣಿಗೆ ಬೆಂಗಳೂರಿನಂತ ರಾಜಧಾನಿ ನಗರದಂಚಿನಲ್ಲಿ ಕಂಡು ಬರುವುದು ಬಲು ಸಂತಸದ ವಿಷಯ.ಇನ್ನು, ಜಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಯಾವುದೇ ಬೇಧ-ಭಾವವಿಲ್ಲದೇ ಭಕ್ತರೆಲ್ಲರೂ ಒಂದಾಗಿ ಆಹಾರ ಸೇವಿಸಿದರು.