ಕರ್ನಾಟಕ

karnataka

ETV Bharat / city

ಸಂತೋಷ್​ ಆತ್ಮಹತ್ಯೆ ಕೇಸ್​ನ ಪ್ರಾಥಮಿಕ ತನಿಖಾ ವರದಿ ನಂತರ ಮುಂದಿನ ನಿರ್ಧಾರ: ಸಿಎಂ - basavaraja bommai statement

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಪ್ರಾಥಮಿಕ ತನಿಖಾ ಹಂತದಲ್ಲಿದೆ. ಈ ಪ್ರಾಥಮಿಕ ತನಿಖೆ ಆದ ನಂತರ ಅದರ ಅಗತ್ಯತೆಗಳನ್ನು ಅವಲೋಕಿಸಿ ನಂತರ ಸಿಐಡಿಗೆ ವಹಿಸುವ ಬಗ್ಗೆ ಎಂದು ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

basavaraja-bommai-statement-on-investigation-of-the-suiside-case-of-contractor
ಪ್ರಾಥಮಿಕ ತನಿಖಾ ವರದಿ ಬಂದ ನಂತರ ಮುಂದಿನ ನಿರ್ಧಾರ: ಸಿಎಂ

By

Published : Apr 16, 2022, 11:49 AM IST

Updated : Apr 16, 2022, 12:14 PM IST

ಬೆಂಗಳೂರು: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್​ ಆತ್ಮಹತ್ಯೆ ಪ್ರಕರಣ ಪ್ರಾಥಮಿಕ ತನಿಖಾ ಹಂತದಲ್ಲಿದೆ. ಈ ಪ್ರಾಥಮಿಕ ತನಿಖೆ ಆದ ನಂತರ ಅದರ ಅಗತ್ಯತೆಗಳನ್ನು ಅವಲೋಕಿಸಿದ ಬಳಿಕ ಸಿಐಡಿಗೆ ವಹಿಸುವ ಬಗ್ಗೆ ಎಂದು ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮೃತದೇಹದ ಪೋಸ್ಟ್ ಮಾರ್ಟಮ್ ಆಗಿದೆ, ಎಫ್ಎಸ್ಎಲ್ ವರದಿ ಬರುತ್ತದೆ. ಅದರ ಆಧಾರದ ಮೇಲೆ ಏನು ನಡೆದಿದೆ ಅನ್ನೋದು ತಿಳಿಯುತ್ತದೆ. ಬಳಿಕ ಯಾವ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಂತೋಷ್​ ಆತ್ಮಹತ್ಯೆ ಕೇಸ್​ನ ಪ್ರಾಥಮಿಕ ತನಿಖಾ ವರದಿ ನಂತರ ಮುಂದಿನ ನಿರ್ಧಾರ: ಸಿಎಂ

ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಅಂದು ಸಚಿವರಾಗಿದ್ದ ಕೆ ಜೆ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು, ಜೊತೆಗೆ ಡೆತ್ ನೋಟ್ ಇತ್ತು, ಅವತ್ತು ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತಾ..? ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಆಗಿಲ್ವಾ..? ಕೋರ್ಟ್ ನಿಂದ ಆದೇಶ ಬಂದ ಮೇಲೆ ಎಫ್ಐಆರ್ ದಾಖಲಾಗಿದೆ. ಜೊತೆಗೆ ಅವರ ಮನೆಯವರು ಕೋರ್ಟ್‌ ಗೆ ಹೋಗಬೇಕಾದ ಪರಿಸ್ಥಿತಿ ಬಂತು. ಆದರೆ ಸಂತೋಷ್ ಮನೆಯವರ ದೂರನ್ನು ಪಡೆದುಕೊಂಡಿದ್ದೇವೆ. ಈ ಪ್ರಕರಣ ತನಿಖೆಯಲ್ಲಿ ಏನೆಲ್ಲ ಬರುತ್ತದೆಯೋ ಅದರ ಆಧಾರದ ಮೇಲೆ ಮುಂದಿನ ಹೆಚ್ಚುವರಿ ತನಿಖೆ ನಡೆಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದರೂ, ಈ ಕಾಂಗ್ರೆಸ್ ನವರು ಅವರೇ ಲಾಯರ್ ಆಗಬೇಕು ಅಂತಾರೆ, ಅವರೇ ಜಡ್ಜ್ ಆಗಬೇಕು ಅಂತಾರೆ. ಇದೆಲ್ಲ ನಡೆಯಲ್ಲ, ನೀವು ಏನೆಲ್ಲಾ ಮುಚ್ಚಿ ಹಾಕಿದ್ದೀರಿ ಅನ್ನೋದು ಎಲ್ಲವೂ ಜನರಿಗೆ ಗೊತ್ತಿದೆ. ಅದರಿಂದ ಯಾವಾಗ ಯಾವ ಸೆಕ್ಷನ್ ಹಾಕಬೇಕು ಅಂತ ಕಾನೂನು ಪ್ರಕಾರ ನಿರ್ಧಾರವಾಗುತ್ತದೆ. ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡಲ್ಲ. ಕಾನೂನು ಇದೆ, ಚಾರ್ಜ್ ಶೀಟ್ ಆದ ಮೇಲೆ ಕೋರ್ಟ್ ನಲ್ಲಿ ಸರಿ ಆಗಿದೆಯಾ? ತಪ್ಪು ಆಗಿದ್ಯಾ ಅಂತ ವಿಶ್ಲೇಷಣೆ ನಡೆಯುತ್ತದೆ ಎಂದು ಹೇಳಿದರು‌.

ಕಾಂಗ್ರೆಸ್ ಪ್ರವಾಸದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಪ್ರವಾಸ ಮಾಡಲಿ. ಅದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಇವರು ಬಹಳ ಶುದ್ಧ ಹಸ್ತದವರು, ಪವಿತ್ರ ಹಸ್ತದವರು, ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಈಗಾಗಲೇ ಜನರಿಗೆ ಗೊತ್ತಾಗಿದೆ. ಇದರಿಂದ ಯಾವ ಪ್ರಯೋಜನ ಆಗಲ್ಲ ಎಂದು ಟೀಕಿಸಿದ್ದಾರೆ.

ಓದಿ:ಈಶ್ವರಪ್ಪ ರಾಜೀನಾಮೆ ಅಂಗೀಕಾರ: ಸಂಪುಟದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದ ರಾಜ್ಯಪಾಲ ಗೆಹ್ಲೋಟ್

Last Updated : Apr 16, 2022, 12:14 PM IST

ABOUT THE AUTHOR

...view details