ಕರ್ನಾಟಕ

karnataka

ETV Bharat / city

103 ಕೋಟಿ ರೂ. ವೆಚ್ಚದ ಹೃದ್ರೋಗ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದ ಸಿಎಂ - ಬೆಂಗಳೂರು ಹೃದ್ರೋಗ ಆಸ್ಪತ್ರೆ ಕಟ್ಟಡ ಉದ್ಘಾಟನೆ

ಜಯದೇವ ಹೃದ್ರೋಗ ಆಸ್ಪತ್ರೆ ಆವರಣದಲ್ಲಿ ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್ (Infosys Foundation) 350 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದು, ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಉದ್ಘಾಟನೆಗೊಳಿಸಿದರು.

Basavaraj Bommai
ಬಸವರಾಜ ಬೊಮ್ಮಾಯಿ

By

Published : Nov 18, 2021, 7:29 AM IST

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ (Infosys Foundation) ವತಿಯಿಂದ ಜಯದೇವ ಹೃದ್ರೋಗ ಆಸ್ಪತ್ರೆಯ (Jayadeva hospital ) ಆವರಣದಲ್ಲಿ ನಿರ್ಮಾಣವಾಗಿರುವ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ವನ್ನು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸುಧಾಮೂರ್ತಿ ನನ್ನ ಹಿರಿಯ ಅಕ್ಕ. ನಾರಾಯಣಮೂರ್ತಿ ಅವರು ಆದರ್ಶ ಪುರುಷರು. ಸುಧಾ ಅಕ್ಕ ಅವರದ್ದು ನನ್ನದು ಒಂದೇ ಕಾಲೇಜ್​ ಜೊತೆಗೆ ಮೊದಲು ಕೆಲಸ ಮಾಡಿದ ಸಂಸ್ಥೆ ಸಹ ಒಂದೇ. ಹೀಗಾಗಿ, ನಾನು ಅವರನ್ನು ಅನುಸರಿಸುತ್ತಿದ್ದೇನೆ ಅನಿಸುತ್ತಿದೆ ಎಂದರು.

ಜಯದೇವ ಹೃದ್ರೋಗ ಆಸ್ಪತ್ರೆಯ ಹೊಸ ಕಟ್ಟದ ಉದ್ಘಾಟನೆ

ಇದನ್ನೂ ಓದಿ:ಇಂದು ಜಯದೇವದಲ್ಲಿ ಉದ್ಘಾಟನೆಯಾಗಲಿದೆ 350 ಬೆಡ್‌ ಸಾಮರ್ಥ್ಯದ ನೂತನ ಕಟ್ಟಡ

ಈ ಕಾಲದಲ್ಲಿ ಜ್ಞಾನಕ್ಕೆ ಬಹಳ ಮಹತ್ವವಿದೆ. ಜಯದೇವಕ್ಕೆ ಇನ್ಫೋಸಿಸ್ ಕೊಡುಗೆ ಬಹಳ ಮಹತ್ವದ್ದು, ಬಹಳ ಅಗತ್ಯ ಕೂಡ ಹೌದು. ಕರ್ನಾಟಕ ಪ್ರಗತಿಪರ ರಾಜ್ಯ ಆಗಿದ್ದರೂ ಕೂಡ ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಬಹಳ ಕೆಲಸವಾಗಬೇಕಿದೆ.

250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜಯದೇವ ಆಸ್ಪತ್ರೆಯ ಮಂಜುನಾಥ್, ಜೀವನವನ್ನೇ ಸಂಸ್ಥೆಯ ಉದ್ಧಾರಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಹೆಲ್ತ್ ಮಿಷನ್ ಡಾಕ್ಯುಮೆಂಟ್ (Health Mission Document) ಸ್ವಲ್ಪ ದಿನದಲ್ಲೇ ರಾಜ್ಯಕ್ಕೆ ಮಾಡುತ್ತೇವೆ. ಇದರಲ್ಲಿ ನನ್ನ ಸೇವೆ ಏನೂ ಇಲ್ಲ. ಆಸ್ಪತ್ರೆ ಕಟ್ಟಿಸಿದ್ದು ಸುಧಾಮೂರ್ತಿ ಅವರು, ಕೆಲಸ ಮಾಡುತ್ತಿರುವವರು ಜಯದೇವದವರು. ನನ್ನದು ಪುಕ್ಕಟೆ ಪ್ರಚಾರ ಎಂದು ಹಾಸ್ಯ ಚಟಾಕೆ ಹಾರಿಸಿದರು.

ಇದನ್ನೂ ಓದಿ:Kulgam Encounter: ಕುಲ್ಗಾಮ್‌ನಲ್ಲಿ ಐವರು ಉಗ್ರರ ಹತ್ಯೆಗೈದ ಭದ್ರತಾಪಡೆ

ABOUT THE AUTHOR

...view details