ಕರ್ನಾಟಕ

karnataka

By

Published : Mar 3, 2020, 3:46 AM IST

ETV Bharat / city

'ಆಚೆ ಬನ್ನಿ' ಅಂತಿದ್ದಾರೆ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು!

ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸರು ಹಮ್ಮಿಕೊಂಡಿರುವ 'ಆಚೆ ಬನ್ನಿ' ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಭಿತ್ತಿಪತ್ರ ಹಿಡಿದು ಬಸವನಗುಡಿಯ ಸಾರ್ವಜನಿಕರಿಗೆ ‌ಜಾಗೃತಿ ಮೂಡಿಸಿದರು.

Basavanagudi police awareness programe
ಭಿತ್ತಿಪತ್ರ ಹಿಡಿದು ದಕ್ಷಿಣ ವಿಭಾಗದ ಪೊಲೀಸರಿಂದ ಜಾಗೃತಿ

ಬೆಂಗಳೂರು: ನಗರ ದಕ್ಷಿಣ ವಿಭಾಗದ ಪೊಲೀಸರು ಹಮ್ಮಿಕೊಂಡಿರುವ 'ಆಚೆ ಬನ್ನಿ' ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಭಿತ್ತಿಪತ್ರ ಹಿಡಿದು ಬಸವನಗುಡಿಯ ಸಾರ್ವಜನಿಕರಿಗೆ ‌ಜಾಗೃತಿ ಮೂಡಿಸಿದರು.

ಭಿತ್ತಿಪತ್ರ ಹಿಡಿದು ದಕ್ಷಿಣ ವಿಭಾಗದ ಪೊಲೀಸರಿಂದ ಜಾಗೃತಿ

ಬಸವನಗುಡಿಯ ಎನ್.ಆರ್.ಕಾಲೋನಿ ಬಳಿಯ ಅಶ್ವತ ಸಭಾಂಗಣದಲ್ಲಿ 'ಆಚೆ ಬನ್ನಿ' ಕಾರ್ಯಕ್ರಮಕ್ಕೆ ಮಾಜಿ‌ ಮೇಯರ್ ಹಾಗೂ ಪಾಲಿಕೆ ಸದಸ್ಯ ಕಟ್ಟೆ ಸತ್ಯನಾರಾಯಣ ಹಾಗೂ ಡಿಸಿಪಿ‌ ಡಾ.ರೋಹಿಣಿ ಸಫೆಟ್ ಚಾಲನೆ ನೀಡಿದರು. ಈ ಬಗ್ಗೆ ಮಾತನಾಡಿದ ಸತ್ಯನಾರಾಯಣ, ಆಚೆ ಬನ್ನಿ ಎಂಬ ಕಾರ್ಯಕ್ರಮ ಎಂದರೆ ಮಹಿಳೆಯರು ಧೈರ್ಯವಾಗಿ ಹೊರಬನ್ನಿ ಎಂದರ್ಥ. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಕಾನೂನಾತ್ಮಕವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗ್ಗೆ ಪರಿಹರಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಮೊದಲು ಹಬ್ಬ ಬಂದಾಗ ನೆರೆಹೊರೆಯವರು ಕರೆಯುವ ಸಂಪ್ರದಾಯವಿತ್ತು. ಈ ಮೂಲಕ ಅಕ್ಕಪಕ್ಕದ ಮನೆಯವರು ಸಹಬಾಳ್ವೆ ಹಾಗೂ ಭಾತೃತ್ವದಿಂದ ಬಾಳಲು ನೆರವಾಗುತ್ತಿತ್ತು. ಆದರೆ ಇತ್ತೀಚಿನ ಹಲವು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ನೆರೆಹೊರೆಯವರ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಸಮಸ್ಯೆಗಳ ಬಂದಾಗ ಒಗ್ಗಟ್ಟಾಗಿ ಹೋರಾಡದೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಾರೆ. ಹೀಗಾಗಿಯೇ ನಗರದ ಜನರು ಆತಂಕ ಹಾಗೂ ಅಭಯದಿಂದ ಕೂಡಿರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ ಎಂದರು.

ಡಿಸಿಪಿ ರೋಹಿಣಿ ಸಫೆಟ್ ಕಟೋಚ್ ಮಾತನಾಡಿ, ನಿರ್ಜನ ಹಾಗೂ ಕತ್ತಲಿನಲ್ಲಿ ಏಕಾಂಗಿಯಾಗಿ ಓಡಾಡುವ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಭಯ ಉಂಟಾಗಬಾರದು.‌ ಅವರಲ್ಲಿ ಭಯ ಹೋಗಲಾಡಿಸಿ ಧೈರ್ಯ ಹಾಗೂ ಸುರಕ್ಷಿತ ಮನೋಭಾವನೆ ರೂಢಿಸಿಕೊಳ್ಳಲು 'ಆಚೆ ಬನ್ನಿ' ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ತಾವು ವಾಸಿಸುವ ಏರಿಯಾಗಳಲ್ಲಿ ಏನಾದರೂ ತೊಂದರೆಯಾಗುತ್ತಿದ್ದರೆ, ನಮ್ಮೊಂದಿಗೆ ಹಂಚಿಕೊಳ್ಳಿ. ಅಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲಾಗುವುದು. ಮಹಿಳೆಯರ ಭದ್ರತೆಗಾಗಿ ಕೆಲವೆಡೆ ಹೊಯಳ್ಸ ಪೊಲೀಸರನ್ನು ನಿಯೋಜಿಸಲಾಗುವುದು. ನಮ್ಮ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ನಾಗರಿಕರು ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details