ಬೆಂಗಳೂರು:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಮಹಿಳೆಯ ಮೊದಲ ಗಂಡನನ್ನು ಕೊಲೆ ಮಾಡಿದ್ದ ಎರಡನೇ ಗಂಡ ಸೇರಿ ಮೂವರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಮೊದಲ ಗಂಡನ ಕೊಲೆ ಪ್ರಕರಣ: ಎರಡನೇ ಪತಿ ಸೇರಿ ಮೂವರ ಬಂಧನ - ಬೆಂಗಳೂರು ಕ್ರೈಮ್ ಸುದ್ದಿ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಮಹಿಳೆಯ ಮೊದಲ ಗಂಡನನ್ನು ಕೊಲೆ ಮಾಡಿದ್ದ ಎರಡನೇ ಗಂಡ ಸೇರಿ ಮೂವರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಣ್ ಆಲಿಯಾಸ್ ಲಕ್ಕಿ, ಚೇತನ್ ಹಾಗೂ ಪ್ರತಾಪ್ ಬಂಧಿತ ಆರೋಪಿಗಳು. ಸಿದ್ದರಾಜು ಕೊಲೆಯಾಗಿದಾತ. ಮಳವಳ್ಳಿ ಮೂಲದ ಸಿದ್ದರಾಜು ಕಳೆದ ಏಳು ವರ್ಷಗಳ ಹಿಂದೆ ಲತಾ ಎಂಬುವವರನ್ನು ಮದುವೆಯಾಗಿದ್ದು, ಆರು ತಿಂಗಳಲ್ಲೇ ಹೆಂಡತಿಯಿಂದ ದೂರವಾಗಿದ್ದ. ಆ ಬಳಿಕ ಒಂಟಿಯಾದ ಸಿದ್ದರಾಜು ಹೆಂಡತಿಯನ್ನು ಲಕ್ಷ್ಮಣ್ ಎಂಬಾತ ಮದುವೆಯಾಗಿದ್ದ. ಪತ್ನಿಯಿಂದ ದೂರವಾಗಿದ್ದ ಸಿದ್ದರಾಜು, ಗಾಂಧಿಬಜಾರ್ ಬಳಿಯ ಲಾರಿ ಸ್ಟ್ಯಾಂಡ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಬೆಳೆಸಿಕೊಂಡಿದ್ದ ಈತ, ಹೆಂಡತಿ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ.
ಈ ವಿಷಯ ತಿಳಿದ ಎರಡನೇ ಗಂಡ ಲಕ್ಷ್ಮಣ್, ತನ್ನ ಸಹಚರರಿಗೆ ಮದ್ಯಪಾನ ಮಾಡಿಸಿ ಚಾಕುವಿನಿಂದ ಸಿದ್ದರಾಜು ಎದೆಗೆ ಇರಿದು ಕೊಲೆ ಮಾಡಿಸಿದ್ದ. ಈ ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.