ನೆಲಮಂಗಲ: ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆಂದು ಸಾರಲು ಇಂದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ನಾಳಿನ ಮತದಾನಕ್ಕೆ ಪೊಲೀಸ್ ಹದ್ದಿನ ಕಣ್ಣು: ಪಥಸಂಚಲನದ ಮೂಲಕ ಧೈರ್ಯ ತುಂಬಿದ ಖಾಕಿ ಪಡೆ - undefined
ಲೋಕಸಭೆ ಚುನಾವಣೆ ಹಿನ್ನೆಲೆ ನೆಲಮಂಗಲದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಪಥಸಂಚಲನ ನಡೆಸಿದರು
ಪೊಲೀಸರ ಪಥಸಂಚಲನ
ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಪೆಟ್ ನೇತೃತ್ವದಲ್ಲಿ ಪೊಲೀಸರ ಪಥಸಂಚಲನ ನಡೆಸಿದರು. ನೆಲಮಂಗಲ ಪ್ರಮುಖ ರಸ್ತೆಗಳಲ್ಲಿ ಸುಮಾರು 5ಕಿಮೀವರೆಗೆ ಪಥಸಂಚಲನ ನಡೆಸಿದ ಪೊಲೀಸರ ಜೊತೆ ಅರೆ ಸೇನಾಪಡೆ ಸಹ ಹೆಜ್ಜೆ ಹಾಕಿತು.
ಏಪ್ರಿಲ್ 18ರಂದು (ನಾಳೆ) ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲ್ಲಿದ್ದು, ಸಕಲ ರೀತಿಯ ಸಿದ್ಧತೆಗಳು ನಡೆದಿವೆ. ಚುನಾವಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸ್ ಇಲಾಖೆ ಜನರಲ್ಲಿ ಧೈರ್ಯ ತುಂಬುವ ಸಲುವಾಗಿ ಪಥಸಂಚಲನ ನಡೆಸಿದೆ.