ಕರ್ನಾಟಕ

karnataka

ETV Bharat / city

ದೇಸಿ ಪಿಸ್ತೂಲ್​ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅಂದರ್​: ರೈಸ್​ ಪುಲ್ಲಿಂಗ್​ ಮೂಲಕ ವಂಚನೆ - undefined

ಬೆಂಗಳೂರಲ್ಲಿಅಕ್ರಮ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ

ರೈಸ್​ ಪುಲ್ಲಿಂಗ್​ ಮಾಡ್ತಿದ್ದ ಗ್ಯಾಂಗ್​ ಅಂದರ್

By

Published : Apr 9, 2019, 5:43 AM IST

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಶಕೀಲ್, ಶರ್ವಣ್ ಕತ್ರಿ, ರಫಿ ಅಹಮದ್ ಖಾನ್, ಸೈಯದ್ ವಸೀಂ, ಉತ್ತರ ಭಾರತದ ಇಮ್ರಾನ್ ಖಾನ್, ಮೊಹಮ್ಮದ್ ಹಸನ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತರಿಂದ 2 ದೇಸಿ ಪಿಸ್ತೂಲ್, ಎಂಟು ಜೀವಂತ ಗುಂಡುಗಳು, ಒಂದು ಏರ್ ಗನ್, 500 ಎಂ ಎಲ್ ಕ್ಲೋರೋಫಾಮ್ ವಶಕ್ಕೆ ಪಡೆದುಕೊಂಡಿದ್ದಾರೆ.

ಆರ್.ಟಿ.ನಗರ ಠಾಣಾ ವ್ಯಾಪ್ತಿಯ ತರಳುಬಾಳು ರಸ್ತೆಯಲ್ಲಿ ಪಿಸ್ತೂಲ್ ಹಾಗೂ ಗುಂಡುಗಳನ್ನು‌ ಮಾರಾಟ ಮಾಡುವಾಗ ಸಿಸಿಬಿ ಪೊಲೀಸರ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ವಿಚಾರಣೆ ನಡೆಸಲು ಎಂಟು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ರೈಸ್​ ಪುಲ್ಲಿಂಗ್​ ಮಾಡ್ತಿದ್ದ ಗ್ಯಾಂಗ್​ ಅಂದರ್

ರೈಸ್​ ಪುಲ್ಲಿಂಗ್​ ಮಾಡ್ತಿದ್ದ ಗ್ಯಾಂಗ್​

ರೈಸ್​ ಪುಲ್ಲಿಂಗ್​ (ಹಣ ದುಪ್ಪಟ್ಟು ಮಾಡುವ ಪೊಳ್ಳು ಭರವಸೆ) ಮೂಲಕ ಈ ಗ್ಯಾಂಗ್​ ಲಕ್ಷಾಂತರ ರೂ. ಪಡೆದು ಜನರಿಗೆ ಮೋಸ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರದವಾರದ ಈ ಗುಂಪು ಒಟ್ಟಿಗೆ ಅಪರಾಧ ಕೃತ್ಯಗಳನ್ನು ಎಸಗಲು ಪ್ಲಾನ್ ಮಾಡ್ತಿದ್ರು. ಆಧುನಿಕ ಕಟರ್ ಮೂಲಕ ಎಂತಹ ಬೀಗವನ್ನಾದರೂ ಕಟ್​ ಮಾಡಿ, ಕಳ್ಳತನ ಮಾಡುತ್ತಿದ್ದರು. ನಗರಕ್ಕೆ ಪಿಸ್ತೂಲ್ ಮಾರಾಟ ಮಾಡುವ ಗ್ಯಾಂಗ್ ಬಂದಿದೆ ಎಂಬ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ಬಲೆ ಬೀಸಿ, ಎಂಟು ಮಂದಿಗೆ ಕೈಗೆ ಕೋಳ ತೊಡಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಇವರು ಬೇಕಾಗಿದ್ದು, ವಿಚಾರಣೆ ನಡೆಸಲಾಗ್ತಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details