ಕರ್ನಾಟಕ

karnataka

ETV Bharat / city

ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್: ಪ್ರತ್ಯೇಕ FIR ದಾಖಲಿಸಿದ NIA - ರೇಪ್ ಆರೋಪಿಗಳ ವಿರುದ್ಧ ಎಫ್​ಐಆರ್

ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ‌ ಆರೋಪಿಗಳನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಎನ್​​ಐಎ ಸಿದ್ಧತೆ ನಡೆಸುತ್ತಿದೆ. ಜೊತೆಗೆ ಸಂತ್ರಸ್ತೆಯನ್ನು ವಿಚಾರಣೆ ನಡೆಸಲು ಮುಂದಾಗಿದೆ.

Rape
Rape

By

Published : Jul 21, 2021, 12:53 AM IST

ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಆತ್ಯಾಚಾರ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ರಾಮಮೂರ್ತಿನಗರ ಪೊಲೀಸರಿಂದ ಮಾಹಿತಿ ಪಡೆದಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ‌.


ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಪ್ರಮುಖ‌ ಆರೋಪಿಗಳನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಎನ್​​ಐಎ ಸಿದ್ಧತೆ ನಡೆಸುತ್ತಿದೆ. ಜೊತೆಗೆ ಸಂತ್ರಸ್ತೆಯನ್ನು ವಿಚಾರಣೆ ನಡೆಸಲು ಮುಂದಾಗಿದೆ.


ಕಳೆದ ಮೇ 27ರಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕನಕನಗರದ ಬಾಡಿಗೆ ಮನೆಯಲ್ಲಿ ಬಾಂಗ್ಲಾ ಯುವತಿ ಮೇಲೆ‌‌ ಸಾಮೂಹಿಕ ಆತ್ಯಾಚಾರ ಪ್ರಕರಣ ಸಂಬಂಧ ನಗರ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿತ್ತು.


ಯುವತಿಯರನ್ನ ಇಟ್ಟುಕೊಂಡು ಆರೋಪಿಗಳು ಮಾಂಸ ದಂಧೆ ನಡೆಸುತ್ತಿದ್ದರು. ವಿಚಾರಣೆ ವೇಳೆ ಪೊಲೀಸರೆದುರಿಗೆ ಈ ವಿಚಾರ ಬಾಯ್ಬಿಟ್ಟಿದ್ದರು. ಈ ವೇಳೆ ಆರೋಪಿಗಳ ವಶದಲ್ಲಿದ್ದ ಬಾಂಗ್ಲಾ ಮೂಲದ 7 ಯುವತಿಯರನ್ನು ಪೊಲೀಸರು ರಕ್ಷಿಸಿದ್ದರು. ಬಳಿಕ ಪ್ರಕರಣ ಹೆಣ್ಣೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.


ನಕಲಿ ದಾಖಲೆಗಳನ್ನು ಸೃಷ್ಟಿಸಿ ಯುವತಿಯರನ್ನ ಬೆಂಗಳೂರಿಗೆ ಕರೆತಂದಿದ್ದ ಹಿನ್ನೆಲೆಯಲ್ಲಿ ಯುವತಿಯರ ಸ್ಥಳೀಯ ದಾಖಲೆಗಳ ಬಗ್ಗೆ ಎನ್​​ಐಎ ಮಾಹಿತಿ ಕೇಳಿದೆ. ಯಾವ ರೀತಿಯಲ್ಲಿ ಇವರು ಸ್ಥಳೀಯ ದಾಖಲೆಗಳನ್ನ ಮಾಡಿಸಿದ್ದರು? ಆಧಾರ್ ಕಾರ್ಡ್ ಮಾಡಿಸಲು ಕೊಟ್ಟಂತಹ ದಾಖಲೆಗಳೇನು ? ಯಾವೆಲ್ಲಾ ದಾಖಲೆಗಳನ್ನ ಪರೀಶೀಲಿಸಿ ಆಧಾರ್ ಕಾರ್ಡ್ ನೀಡಲಾಯ್ತು? ಆಧಾರ್ ಕಾರ್ಡ್ ಮಾಡಿಸಿಕೊಟ್ಟವರು ಯಾರು? ಈ ಎಲ್ಲದರ ಬಗ್ಗೆ ಎನ್ಐಎ ತನಿಖೆ ನಡೆಸಲು ಮುಂದಾಗಿದೆ.(ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಇನ್ನೆರಡು ದಿನಗಳಲ್ಲಿ‌ ಚಾರ್ಜ್‌ಶೀಟ್ ಸಲ್ಲಿಕೆ)

ABOUT THE AUTHOR

...view details