ಕರ್ನಾಟಕ

karnataka

ETV Bharat / city

'ಆ' ವೆಬ್​ಸೈಟ್​ನಲ್ಲಿ ತನ್ನದೇ ಏಕಾಂತದ ವಿಡಿಯೋ ನೋಡಿ ದಂಗಾದ ಯುವಕ! - ಬೆಂಗಳೂರು ಸೈಬರ್​ ಕ್ರೈಂ ಸುದ್ದಿ

ಸಂತ್ರಸ್ತ ಯುವಕ ಹಲವು ದಿನಗಳ ಹಿಂದೆ ಹೋಟೆಲ್​ವೊಂದರಲ್ಲಿ ಸ್ನೇಹಿತೆ ಜೊತೆ ಖಾಸಗಿ ಸಮಯ ಕಳೆದಿದ್ದ‌.‌ ಜನವರಿ 21ರಂದು ಇಂಟರ್​ನೆಟ್‌ನಲ್ಲಿ ಪೋರ್ನ್ ವೆಬ್​ಸೈಟ್ ನೋಡುವಾಗ ತನ್ನದೇ ನಗ್ನ ವಿಡಿಯೋ ನೋಡಿ ಒಂದು ಕ್ಷಣ ಸಿಡಿಲು ಬಡಿದಂತಾಗಿದೆ..

Bangalore young man see own video in Porn website, Bangalore cyber crime news, Bangalore news, ಪೋರ್ನ್ ವೆಬ್​ಸೈಟಿನಲ್ಲಿ ತನ್ನದೇ ವಿಡಿಯೊ ನೋಡಿದ ಯುವಕ, ಬೆಂಗಳೂರಿನಲ್ಲಿ ಪೋರ್ನ್ ವೆಬ್​ಸೈಟಿನಲ್ಲಿ ತನ್ನದೇ ವಿಡಿಯೊ ನೋಡಿದ ಯುವಕ, ಬೆಂಗಳೂರು ಸೈಬರ್​ ಕ್ರೈಂ ಸುದ್ದಿ, ಬೆಂಗಳೂರು ಸುದ್ದಿ,
ಪೋರ್ನ್ ವೆಬ್ ಸೈಟಿನಲ್ಲಿ ತನ್ನದೇ ವಿಡಿಯೊ ನೋಡಿ ದಂಗಾದ ಯುವಕ

By

Published : Feb 1, 2022, 2:09 PM IST

ಬೆಂಗಳೂರು : ಪೋರ್ನ್ ವೆಬ್​ಸೈಟ್ ನೋಡುವಾಗ ಗೆಳತಿ ಜೊತೆ ಕಳೆದಿದ್ದ ತನ್ನದೇ ಖಾಸಗಿ‌ ವಿಡಿಯೋ ನೋಡಿದ ಯುವಕನೊಬ್ಬ ದಂಗಾಗಿದ್ದಾನೆ. ನಗ್ನ ವಿಡಿಯೋ ಪತ್ತೆ ಸಂಬಂಧ ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಆಸ್ಟಿನ್ ಟೌನ್ ನಿವಾಸಿಯಾಗಿರುವ 24 ವರ್ಷದ ಯುವಕ ಇತ್ತೀಚೆಗೆ ಇಂಟರ್​ನೆಟ್​ನಲ್ಲಿ ಸರ್ಚ್ ಮಾಡುವಾಗ ಗೆಳತಿ ಜೊತೆ ಕಳೆದ ನಗ್ನ ವಿಡಿಯೋ ಪತ್ತೆಯಾಗಿದೆ. ಇದನ್ನು ನೋಡಿದ ಯುವಕ ಶಾಕ್​ಗೆ ಒಳಗಾಗಿದ್ದಾನೆ.

ಓದಿ:ಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್‌ ರೈಲುಗಳ ಸೇವೆ

ಸಂತ್ರಸ್ತ ಯುವಕ ಹಲವು ದಿನಗಳ ಹಿಂದೆ ಹೋಟೆಲ್​ವೊಂದರಲ್ಲಿ ಸ್ನೇಹಿತೆ ಜೊತೆ ಖಾಸಗಿ ಸಮಯ ಕಳೆದಿದ್ದ‌.‌ ಜನವರಿ 21ರಂದು ಇಂಟರ್​ನೆಟ್‌ನಲ್ಲಿ ಪೋರ್ನ್ ವೆಬ್​ಸೈಟ್ ನೋಡುವಾಗ ತನ್ನದೇ ನಗ್ನ ವಿಡಿಯೋ ನೋಡಿ ಒಂದು ಕ್ಷಣ ಸಿಡಿಲು ಬಡಿದಂತಾಗಿದೆ.

ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ ವಿಡಿಯೋ ಡಿಲೀಟ್ ಮಾಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾನೆ. ಈ ಘಟನೆ ಸಂಬಂಧ ಸೈಬರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details