ಬೆಂಗಳೂರು: ಲಾಕ್ ಡೌನ್ ಆದೇಶದ ಬೆನ್ನಲ್ಲೇ ಮತ್ತೆ ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದಲೇ ನಗರದಲ್ಲಿ 144 ಸೆಕ್ಷನ್ ಜಾರಿಗೆ ತರುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕೊರೊನಾ 'ಲಾಕ್ ಡೌನ್': ಬೆಂಗಳೂರಲ್ಲಿ ನಾಳೆ ಬೆಳಗ್ಗೆ 6 ರಿಂದ 144 ಸೆಕ್ಷನ್ ಜಾರಿ - ಕೊರೊನಾ ಚಿಕಿತ್ಸೆ
ಕೊರೊನಾ ಭೀತಿ ಹಿನ್ನೆಲೆ ದೇಶದ ಪ್ರಮುಖ ನಗರಗಳನ್ನು ಲಾಕ್ ಡೌನ್ ಮಾಡಲಾಗಿದೆ. ಬೆಂಗಳೂರು ಸಹ ಲಾಕ್ಡೌನ್ ಆಗಲಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದಲೇ ನಗರದಲ್ಲಿ 144 ಸೆಕ್ಷನ್ ಜಾರಿಯಾಗಲಿದೆ.
![ಕೊರೊನಾ 'ಲಾಕ್ ಡೌನ್': ಬೆಂಗಳೂರಲ್ಲಿ ನಾಳೆ ಬೆಳಗ್ಗೆ 6 ರಿಂದ 144 ಸೆಕ್ಷನ್ ಜಾರಿ bangalore-will-lock-down-from-tomorrow](https://etvbharatimages.akamaized.net/etvbharat/prod-images/768-512-6517552-thumbnail-3x2-pc.jpg)
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಎಸಿಪಿ ಹಾಗೂ ಡಿಸಿಪಿಗಳ ಸಭೆ ಮುಗಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕೊರೊನಾ ಸೋಂಕು ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶವಿದೆ. ನಾಳೆಯಿಂದ ನಗರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೊಂದಲವಿದೆ. ಸಂಜೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಕರೆದಿದ್ದು, ಅಂತಿಮ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.
ನಾಳೆ ಬೆಳಗ್ಗೆ 6 ಗಂಟೆಯಿಂದ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ಆಟೋ, ಓಲಾ, ಉಬರ್ ಸಾರಿಗೆ ವ್ಯವಸ್ಥೆ, ಪೆಟ್ರೋಲ್ ಲಭ್ಯತೆ ಕುರಿತಂತೆ ಸದ್ಯದಲ್ಲಿಯೇ ಮಾಹಿತಿ ನೀಡುವುದಾಗಿ ಅವರು ಹೇಳಿದ್ರು.