ಬೆಂಗಳೂರು: ಡಿ.ಜಿ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಕಾರ್ಪೊರೇಟರ್ಗಳ ಪ್ರಾಥಮಿಕ ತನಿಖೆಯನ್ನ ಸದ್ಯ ಸಿಸಿಬಿ ಅಧಿಕಾರಿಗಳು ಮುಗಿಸಿದ್ದಾರೆ. ಆದರೆ, ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಹುಸೇನ್ಗೆ ಸಿಸಿಬಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಇಬ್ಬರ ಬಳಿಯಿದ್ದ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಲಭೆ ರಾತ್ರಿ ನಡೆದ ಕಾರಣ ಕೇವಲ ವಿಡಿಯೋ ಆಧಾರದ ಮೇರೆ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸರು ಮೊಬೈಲ್ ಲೋಕೇಷನ್, ಮೊಬೈಲ್ ಕರೆಗಳು ಮತ್ತು ಸಂದೇಶಗಳ ಆಧಾರದ ಮೇಲೆ ಆರೋಪಿಗಳನ್ನ ಮಟ್ಟ ಹಾಕ್ತಿದ್ದಾರೆ. ಇಬ್ಬರು ಕಾರ್ಪೊರೇಟರ್ಗಳ ಮೊಬೈಲ್ನಲ್ಲಿರುವ ಮಾಹಿತಿಯು ತನಿಖಾಧಿಕಾರಿಗಳಿಗೆ ಬಹಳ ಮುಖ್ಯವಾಗಿದೆ. ಸದ್ಯ ಸಿಸಿಬಿ ಪೊಲೀಸರು ಸಂಪತ್ ರಾಜ್ ಪಿಎ ಅರುಣ್ ಮೊಬೈಲ್ನ್ನು ಟೆಕ್ನಿಕಲ್ ಸೆಲ್ಗೆ ರವಾನಿಸಿದ್ದಾರೆ.
ಸದ್ಯ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಗಲಭೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮೇಯರ್ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ. ಆದರೆ ತನಿಖಾಧಿಕಾರಿಗಳಿಗೆ ಈಗಾಗಲೇ ಅಖಂಡ ಶಾಸಕ ಶ್ರೀನಿವಾಸ್ಮೂರ್ತಿ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ಗೆ ಚುನಾವಣಾ ವಿಚಾರದಲ್ಲಿ ಜಿದ್ದಾಜಿದ್ದಿ ಇದ್ದುದಾಗಿ ತಿಳಿದಿದೆ ಎನ್ನಲಾಗ್ತಿದೆ. ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದರೂ ಕೂಡ ಘಟನೆಗೂ ನನಗೂ ಸಂಬಂಧವಿಲ್ಲ. ಹಾಗೆ ನನ್ನ ಪಿಎ ಅರುಣ್ ಗಲಭೆಕೋರರ ಜೊತೆ ಏನ್ ಮಾತಾಡಿದ್ದ ಅನ್ನೋದು ಗೊತ್ತಿಲ್ಲ. ಬಂಧಿತರು ಎಲ್ಲಾ ನಮ್ಮ ವ್ಯಾಪ್ತಿ ಇರುವ ಕಾರಣ ಪರಿಚಯ ಇದೆ ಅಷ್ಟೇ. ಪರಿಚಯ ಇದ್ದ ಕಾರಣಕ್ಕೆ ಗಲಭೆಯನ್ನು ನಾವೇ ಮಾಡಿಸಿದ್ದೇವೆ ಎಂದು ಹೇಳೋದು ತಪ್ಪು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.