ಕರ್ನಾಟಕ

karnataka

ETV Bharat / city

ಬೆಂಗಳೂರು ವಿವಿ ದಾಖಲಾತಿ ಪ್ರಕ್ರಿಯೆ ಅವಧಿ ವಿಸ್ತರಣೆ - ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ

ಸ್ನಾತಕೋತ್ತರ ಪದವಿ ಪ್ರವೇಶ ಅವಧಿಯನ್ನು ವಿಸ್ತರಣೆ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದ ಆದೇಶ ಹೊರಡಿಸಿದೆ. ಅದರೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಪ್ರವೇಶ ಪ್ರಕ್ರಿಯೆಯ ದಿನಾಂಕವನ್ನೂ ವಿಸ್ತರಣೆ ಮಾಡಿದೆ.

Bangalore University
Bangalore University

By

Published : Dec 22, 2020, 7:54 PM IST

ಬೆಂಗಳೂರು: ಸ್ನಾತಕೋತ್ತರ ಪದವಿ ಪ್ರವೇಶ ಅವಧಿ ವಿಸ್ತರಣೆ ಮಾಡಿ ಬೆಂಗಳೂರು ವಿವಿ ಅಧಿಸೂಚನೆ ಹೊರಡಿಸಿದೆ‌. ಅರ್ಜಿ ವಿತರಿಸಲು, ಅರ್ಜಿ ಸಲ್ಲಿಸಲು ಪ್ರವೇಶ ಪ್ರಕ್ರಿಯೆಯ ದಿನಾಂಕ ಮುಂದೂಡಿ ಆದೇಶ ಹೊರಡಿಸಿದೆ.

ಬೆಂಗಳೂರು ವಿವಿ ಅಧಿಸೂಚನೆ

ವಿವಿಧ ಕೋರ್ಸ್​ಗಳಿಗೆ ದಾಖಲಾತಿ ಆಗುವ ವಿದ್ಯಾರ್ಥಿಗಳಿಗೆ 200 ರೂ. ದಂಡ ಶುಲ್ಕದೊಂದಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಜೇಷ್ಠತಾ ಪಟ್ಟಿಯನ್ನ ಜ. 5ರಂದು ಪ್ರಕಟ ಮಾಡಲಿದ್ದು, ಜೇಷ್ಠತಾ ಪಟ್ಟಿಯ ದೋಷಗಳ ಬಗ್ಗೆ ಅರ್ಜಿ ಸಲ್ಲಿಸಲು ಜನವರಿ 7ರವರೆಗೆ ಅವಕಾಶ ನೀಡಲಾಗಿದೆ. ಅಂತಿಮ ಜೇಷ್ಠತಾ ಪಟ್ಟಿ, ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಷಯಗಳ ಪ್ರವೇಶ ಪ್ರಕ್ರಿಯೆ ದಿನಾಂಕ ಶೀಘ್ರದಲ್ಲೇ ತಿಳಿಸಲಾಗುತ್ತದೆ ಎಂದು ವಿವಿ ತಿಳಿಸಿದೆ.

ABOUT THE AUTHOR

...view details