ಕರ್ನಾಟಕ

karnataka

ETV Bharat / city

ಒಂದೇ ವಾರದಲ್ಲಿ ನಾಲ್ಕು ಕೋಟಿ ದಂಡ ಕಲೆ ಹಾಕಿದ ಟ್ರಾಫಿಕ್ ಪೊಲೀಸರು - ನಾಲ್ಕು ಕೋಟಿ ದಂಡ ಕಲೆ ಹಾಕಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಲಾಕ್ ಡೌನ್ ರಿಲೀಫ್ ನಂತರ ಬೆಂಗಳೂರು ಸಂಚಾರಿ ಪೊಲೀಸರು ಜಾಗೃತರಾಗಿದ್ದು, ನಿಯಮಗಳ ಉಲ್ಲಂಘನೆ ಮತ್ತು ವಾಹನಗಳ ದಾಖಲೆ ಪರಿಶೀಲನೆಯನ್ನ ಮಾಡುತ್ತಿದ್ದಾರೆ. ಹೀಗಾಗಿ ಅಕ್ಟೋಬರ್ 4 ರಿಂದ 10 ರವರೆಗೆ 97,213 ಕೇಸ್ ದಾಖಲಿಸಿ 4.02 ಕೋಟಿ ದಂಡ ವಸೂಲಿ‌ಮಾಡಿದ್ದಾರೆ.

bangalore-traffic-police-collected-four-crores-of-fine
ಟ್ರಾಫಿಕ್ ಪೊಲೀಸ್​

By

Published : Oct 12, 2020, 9:46 PM IST

ಬೆಂಗಳೂರು: ಕೊರೊನಾ ಸೋಂಕಿನ ನಡುವೆ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದು, ಒಂದೇ ವಾರದಲ್ಲಿ ನಾಲ್ಕು ಕೋಟಿ ದಂಡ ಕಲೆ ಹಾಕಿದ್ದಾರೆ.

ಲಾಕ್ ಡೌನ್ ರಿಲೀಫ್ ನಂತರ ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ವಾಹನಗಳ ದಾಖಲೆ ಪರಿಶೀಲನೆಯನ್ನ ಮಾಡಲಾಗುತ್ತಿದೆ. ಹೀಗಾಗಿ ಅಕ್ಟೋಬರ್ 4 ರಿಂದ 10 ರವರೆಗೆ 97,213 ಕೇಸ್ ದಾಖಲಿಸಿ 4.02 ಕೋಟಿ ದಂಡ ವಸೂಲಿ‌ಮಾಡಿದ್ದಾರೆ.

ಸಿಗ್ನಲ್ ಜಂಪ್ 10538 ಪ್ರಕರಣ 38.43 ಲಕ್ಷ ದಂಡ ವಸೂಲಿ, ಹೆಲ್ಮೆಟ್ ರಹಿತ ಬೈಕ್ ಚಾಲನೆ 30712 ಕೇಸ್ 1.14 ಕೋಟಿ ದಂಡ ವಸೂಲಿ. ಹೆಲ್ಮೆಟ್ ಇಲ್ಲದ ಹಿಂಬದಿ ಸವಾರ 19403 ಕೇಸ್ 72 ಲಕ್ಷ ದಂತ ವಸೂಲಿ, ನೋ ಎಂಟ್ರಿಯಲ್ಲಿ ವಾಹನ ಚಾಲನೆ 4154 ಕೇಸ್ 15.77 ಲಕ್ಷ ದಂಡ ವಸೂಲಿ,ಸೀಟ್ ಬೆಲ್ಟ್ ರಹಿತ ಚಾಲನೆ 5364 ಕೇಸ್ 25 ಲಕ್ಷ ದಂಡ ವಸೂಲಿ. ರಾಂಗ್ ಪಾರ್ಕಿಂಗ್ 3887 ಕೇಸ್ 11 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ABOUT THE AUTHOR

...view details