ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 1,498 ಹೊಸ ಪಾಸಿಟಿವ್ ಕೇಸ್ ಪತ್ತೆ: ಸೋಂಕಿತರಿಗೆ ರೆಮ್ಡಿಸಿವಿರ್ ಔಷಧ - ಕೊರೊನಾ ವೈರಸ್​ ವರದಿ

ರಾಜ್ಯದಲ್ಲಿ ಇಂದು 1,498 ಸೋಂಕಿತರು ಪತ್ತೆಯಾಗಿದ್ದು, 15 ಜನರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೋವಿಡ್ ಸೀವಿಯರ್ ಲಕ್ಷಣ ಇರುವವರಿಗೆ ಇಂದಿನಿಂದ ರೆಮ್ಡಿಸಿವಿರ್ ಔಷಧ ಬಳಕೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

bangalore-today-corona-cases-details
ಕೊರೊನಾ ಪಾಸಿಟಿವ್ ಪ್ರಕರಣಗಳು

By

Published : Jul 7, 2020, 9:24 PM IST

Updated : Jul 7, 2020, 10:37 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 1,498 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 15 ಜನರು ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ.

10,000 ಗಡಿ ದಾಟಿದ ಗುಣಮುಖರಾದವರ ಸಂಖ್ಯೆ

ಇಂದು 571 ಮಂದಿ ಡಿಸ್ಚಾರ್ಜ್​​ ಆಗಿದ್ದು, ಈವರೆಗೆ 11,098 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಆದರೆ ಗುಣಮುಖರ ಸಂಖ್ಯೆಗಿಂತ ಸಕ್ರಿಯ ಪ್ರಕರಣಗಳೇ ಹೆಚ್ಚಿದೆ. 15,297 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 279 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ 1,52,310 ಜನರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗಿದೆ. 66,795 ಜನರ ಮೇಲೆ ನಿಗಾ ಇಡಲಾಗಿದೆ. ಖಾಸಗಿ ಆಸ್ಪತ್ರೆಗಳು ಯಾವ ಪ್ರಮಾಣದಲ್ಲಿ ಹಾಸಿಗೆ ನೀಡಬೇಕು ಎಂಬುವುದರ ಕುರಿತು ನಾಳೆ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಕೋವಿಡ್ ಸೀವಿಯರ್ ಲಕ್ಷಣ ಇರೋರಿಗೆ ರೆಮ್ಡಿಸಿವಿರ್ ಔಷಧ ಬಳಕೆ

ಇನ್ಮುಂದೆ ಕೋವಿಡ್ ಸೀವಿಯರ್ ಲಕ್ಷಣ ಇರುವವರಿಗೆ ಇಂದಿನಿಂದ ರೆಮ್ಡಿಸಿವಿರ್ ಔಷಧ ಬಳಕೆ ಮಾಡಲಾಗುತ್ತೆ. ಇದರಿಂದ ಉತ್ತಮ ಫಲಿತಾಂಶ ಬಂದಿದ್ದು, ಇದರ ತಯಾರಿಕೆಗೆ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಅನುಮತಿ ಸಿಕ್ರೆ ನಂಜನಗೂಡಿನ ಜುಬಿಲಂಟ್ ಕಂಪನಿಯಲ್ಲೇ ತಯಾರಿಸಲಾಗುತ್ತೆ. ಸದ್ಯ ಸರ್ಕಾರ ಕೋವಿಡ್ ಸೋಂಕಿತರಿಗೆ ಉಚಿತವಾಗೇ ಈ ಔಷಧ ನೀಡುತ್ತಿದೆ. ಇದನ್ನ ಹಲವು ಖಾಸಗಿಯವರು ಬೇರೆ ಬೇರೆ ಮೂಲಗಳಿಂದ ತರಿಸಿಕೊಂಡು ಬ್ಲಾಕ್​​ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾಡದಂತೆ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಹೋಮ್ ಐಸೋಲೇಷನ್ ಚಿಕಿತ್ಸೆ ಉಚಿತ

ಎ ಸಿಂಟಮ್ಯಾಟಿಕ್ ಸೋಂಕಿತರಿಗೆ ಅಂದರೆ ರೋಗ ಲಕ್ಷಣಗಳು ಇಲ್ಲದವರಿಗೆ ಆಸ್ಪತ್ರೆಯ ಬದಲು ಹೋಮ್ ಐಸೋಲೇಷನ್​​ಗೆ ಆದೇಶ ನೀಡಲಾಗಿದೆ. ಅಂದರೆ ಮನೆಯಲ್ಲಿಯೇ ಪ್ರತ್ಯೇಕವಾಗಿ ನಿಗಾ ಇಡುವುದು ಹಾಗೂ ಇದರ ಸಂಪೂರ್ಣ ಜವಾಬ್ದಾರಿಯನ್ನ ಟಾಸ್ಕ್ ಫೋಸ್ ನೋಡಿಕೊಳ್ಳಲಿದೆ‌‌. ಎ ಸ್ಟಿಂಟಮ್ಯಾಟಿಕ್ ರೋಗಿಗಳಿಗೆ ವಿಟಮಿನ್ ಸಿ, ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತೆ. ಇನ್ನು ಇದೆಲ್ಲವೂ ಉಚಿತವಾಗಿ ಇರಲಿದೆ. ಇದಕ್ಕಾಗಿ ಸೋಂಕಿತರು ಹಣ ವ್ಯಯಿಸಬೇಕಿಲ್ಲ.

Last Updated : Jul 7, 2020, 10:37 PM IST

ABOUT THE AUTHOR

...view details