ಕರ್ನಾಟಕ

karnataka

ETV Bharat / city

ಇದ್ದಕ್ಕಿದ್ದಂತೆ ಕುಸಿದ ಬೆಂಗಳೂರಿನ ರಸ್ತೆ: ಸೃಷ್ಟಿಯಾಯ್ತು 8 ರಿಂದ 10 ಅಡಿ ಆಳದ ಗುಂಡಿ! - ಬೃಹತ್​ ರಸ್ತೆ ಗುಂಡಿ

ಬೆಂಗಳೂರಿನಲ್ಲಿ ಇದ್ದಕ್ಕಿದ್ದ ಹಾಗೆ ರಸ್ತೆ ಕುಸಿದು ಎಂಟರಿಂದ ಹತ್ತು ಅಡಿ ಆಳದ ಗುಂಡಿ ಸೃಷ್ಟಿಯಾಗಿದೆ.

bangalore Pothole
ಇದ್ದಕ್ಕಿದ್ದಂತೆ ಕುಸಿದ ಬೆಂಗಳೂರಿನ ರಸ್ತೆ:

By

Published : Dec 16, 2021, 9:53 PM IST

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದ ರಸ್ತೆ ಇದ್ದಕ್ಕಿದ್ದ ಹಾಗೆ ಕುಸಿದು ಎಂಟರಿಂದ ಹತ್ತು ಅಡಿ ಆಳದ ಗುಂಡಿ ಸೃಷ್ಟಿಯಾಗಿದೆ. ತಳಭಾಗದಲ್ಲಿ ದವಸ-ಧಾನ್ಯ ಸಂಗ್ರಹಣೆಯ ನೆಲಮಾಳಿಗೆ ಇರುವ ತರಹ ಕಾಣುತ್ತಿದೆ.

ಇದ್ದಕ್ಕಿದ್ದಂತೆ ಕುಸಿದ ಬೆಂಗಳೂರಿನ ರಸ್ತೆ:

ಈವರೆಗೂ ಬೆಂಗಳೂರಿನಲ್ಲಿ ಇಷ್ಟೊಂದು ಆಳದ ಗುಂಡಿ ನೋಡಿಲ್ಲ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ. ಇಷ್ಟು ದೊಡ್ಡ ರಸ್ತೆ ಗುಂಡಿ ಕಂಡು ವಾಹನ ಸವಾರರು ಆಶ್ಚರ್ಯ ಪಡುತ್ತಿದ್ದಾರೆ. ಸ್ಥಳೀಯರು ಕೂಡ ಈ ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಆಳದ ಗುಂಡಿಯನ್ನು ನೋಡುತ್ತಿರುವುದು, ನಿರಂತರ ನೀರು ನಿಲ್ಲುವಿಕೆ ಹಾಗೂ ಕಳಪೆ ಗುಣಮಟ್ಟದ ಡಾಂಬರೀಕರಣ ಕಾರಣವಾಗಿರಬಹುದು ಎಂದು ಹೇಳುತ್ತಿದ್ದಾರೆ.

ಬ್ಯಾರಿಕೇಡ್​ಗಳ ತೆರವಿಗೆ ಸೂಚನೆ:

ಗುಂಡಿ ಬಿದ್ದ ಸ್ಥಳದಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಕೆ ಮಾಡಲಾಗಿತ್ತು. ಸ್ಥಳಕ್ಕೆ ದಕ್ಷಿಣ ವಿಭಾಗದ ಜಂಟಿ ಆಯುಕ್ತ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಗುಂಡಿಯನ್ನು ಮುಚ್ಚಿ, ಬ್ಯಾರಿಕೇಡ್​ಗಳ ತೆರವಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:Omicron: ಕರ್ನಾಟಕದಲ್ಲಿ ಮತ್ತೆ 5 ಒಮಿಕ್ರಾನ್ ಪತ್ತೆ, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

ABOUT THE AUTHOR

...view details