ಬೆಂಗಳೂರು: ಕೊರೊನಾ ಲಾಕ್ಡೌನ್ ಟಫ್ ರೂಲ್ಸ್ ಜಾರಿಯಾದ ಹಿನ್ನೆಲೆ, ಅನಗತ್ಯವಾಗಿ ಓಡಾಡುವರಿಗೆ ನಗರದ ಖಾಕಿ ಪಡೆ ಬಿಸಿ ಮುಟ್ಟಿಸುತ್ತಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಹಾಕಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನಗರದ 8 ವಿಭಾಗಗಳಲ್ಲಿ ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ವಾಹನಗಳು ಈವರೆಗೂ ಸೀಜ್ ಆಗಿವೆ. ಜಪ್ತಿಯಾದ ವಾಹನಗಳಲ್ಲಿ ಅತಿ ಹೆಚ್ಚು ಬೈಕ್ ಸವಾರರೇ ಅನಗತ್ಯವಾಗಿ ಓಡಾಟ ನಡೆಸಿದ್ದರು.
ಇದನ್ನೂ ಓದಿ:ಮೋದಿಯವರ ಗಡ್ಡ ಬೆಳೆದಂತೆ ದೇಶದ ಬಡತನವೂ ಎಲ್ಲೆ ಮೀರಿ ಬೆಳೆಯುತ್ತಿದೆ: ಕಾಂಗ್ರೆಸ್ ಟ್ವೀಟ್ ಟೀಕೆ
ಇನ್ನು ಇಲ್ಲಿವರೆಗೂ ನಗರದಲ್ಲಿ ಬರೋಬ್ಬರಿ 2039 ವಾಹನಗಳು ಸೀಜ್ ಆಗಿದ್ದು, ಒಟ್ಟು 20 ಎಫ್ಐಆರ್ ದಾಖಲಾಗಿವೆ. ಒಟ್ಟು 94 ಎನ್ಸಿಆರ್ ಪ್ರಕರಣಗಳು ದಾಖಲಾಗಿವೆ. ಒಟ್ಟು ದ್ವಿಚಕ್ರ ವಾಹನ -1684, ಮೂರು ಚಕ್ರ ವಾಹನ- 137, ನಾಲ್ಕು ಚಕ್ರ ವಾಹನ - 218 ಸೀಜ್ ಆಗಿವೆ. ಆಗ್ನೇಯ ವಿಭಾಗದಲ್ಲೇ ಅತಿಹೆಚ್ಚು ವಾಹನಗಳು ಜಪ್ತಿ ಆಗಿದ್ದು, ಸದ್ಯ ಈಗಲೂ ಕೂಡ ಪೊಲೀಸರಿಂದ ಕಾರ್ಯಚರಣೆ ಮುಂದುವರೆದಿದೆ.
ನಗರದಲ್ಲಿ ವಿಭಾಗವಾರು ಸೀಜ್ ಆದ ವಾಹನ ವಿವರ
- ಪೂರ್ವ - 131
- ಪಶ್ಚಿಮ - 395
- ಉತ್ತರ - 140
- ದಕ್ಷಿಣ - 410
- ಆಗ್ನೇಯ- 421
- ಈಶಾನ್ಯ - 211
- ವೈಟ್ ಫೀಲ್ಡ್ -169