ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಪೇದೆಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸಿಬ್ಬಂದಿಯಲ್ಲಿ ಆತಂಕ ನಿರ್ಮಾಣವಾಗಿದೆ.
ಬೊಮ್ಮನಹಳ್ಳಿ ವಲಯದ ಬೇಗೂರು ವಾರ್ಡ್ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ನಿನ್ನೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಪೇದೆ ಜೊತೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಪೇದೆ ಹೊಂಗಸಂದ್ರ ಬಳಿ ಭದ್ರತೆಗೆ ತೆರಳಿದಾಗ ಕೊರನಾ ಅಂಟಿರುವ ಶಂಕೆ ಇದೆ. ಕೊರೊನಾ ಪಾಸಿಟಿವ್ ಬಂದ ತಕ್ಷಣ ಪೆದೆ ಡಿಪ್ರೆಶನ್ಗೆ ಹೋಗಿದ್ದು, ಪಾಸಿಟಿವ್ ವಿಚಾರ ಗೊತ್ತಾಗಿ ಮೊಬೈಲ್ ಸ್ವೀಚ್ ಆಪ್ ಮಾಡಿದ್ರು. ಬಳಿಕ ಅವರ ಮನವೊಲಿಸಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಪೇದೆ ಕೆಲವು ದಿನದ ಹಿಂದೆ ಅಪಘಾತದಿಂದ ಕಾಲಿಗೆ ಪೆಟ್ಟಾಗಿ ರಜೆಯಲ್ಲಿದ್ದರು. ಗುಣಮುಖರಾದ ನಂತ್ರ ಕೊರೊನಾ ವಾರಿಯರ್ ಆಗಿ ಕೆಲಸ ಮುಂದುವರಿಸಿದ್ರು.
ಈಗಾಗಲೇ ಹೊಂಗಸಂದ್ರ ಬಳಿ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲಿಗೆ ಭದ್ರತೆಗೆ ತೆರಳಿದಾಗ ಪೇದೆಗೆ ಸೊಂಕು ತಗುಲಿದೆ. ಹೀಗಾಗಿ ನಗರದಲ್ಲಿ ಇಲ್ಲಿಯವರೆಗೆ ಯಾವುದೇ ಪೊಲೀಸ್ ಸಿಬ್ಬಂದಿಗೆ ಸೋಂಕು ಪತ್ತೆಯಾಗದ ಕಾರಣ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಆಗ್ನೇಯ ವಿಭಾಗದ ಎಲ್ಲಾ ಸಿಬ್ಬಂದಿ ಜಾಗೃತೆಯಿಂದ ಇರುವಂತೆ ಸೂಚಿಸಿದ್ದಾರೆ.
ಸದ್ಯ ಕಾನ್ಸ್‌ಟೇಬಲ್ ಹಿಸ್ಟರಿಯನ್ನ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಕಲೆ ಹಾಕಿದ್ದು, ಸುಮಾರು 50 ಜನ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪೇದೆ ಯಾರ ಜೊತೆ ಇದ್ರು, ಠಾಣೆಯಲ್ಲಿ ಯಾರ ಜೊತೆ ಸಂಪರ್ಕ ಹೊಂದಿದ್ರು, ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದರೊಂದಿಗೆ ಸದ್ಯ ಆಗ್ನೇಯ ವಿಭಾಗ ಡಿಸಿಪಿ ಜೋಷಿ ಶ್ರೀನಿವಾಸ್ ಮಹದೇವ್ ಅವರು ಎಸಿಪಿ, ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೀಟಿಂಗ್ ನಡೆಸಿದ್ದು, ಠಾಣೆಯಲ್ಲಿ ಪ್ರತಿ ಸಿಬ್ಬಂದಿ, ಆರೋಗ್ಯ ಹಾಗೂ ನೈರ್ಮಲ್ಯ ಕಾಪಾಡಬೇಕು ಹಾಗೂ ಹೊಂಗಸಂದ್ರ ಬಳಿ ತೆರಳಿದ ಸಿಬ್ಬಂದಿ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವಂತೆ ಸೂಚಿಸಿದ್ದಾರೆ.