ಬೆಂಗಳೂರು: ವಾಹನ ಸವಾರರಿಗೆ ರಾಜ್ಯ ಸರ್ಕಾರ ಕೊಂಚ ರಿಲೀಫ್ ನೀಡಿದೆ. ದುಬಾರಿ ದಂಡದಿಂದ ಬೇಸತ್ತಿದ್ದ ಸಿಲಿಕಾನ್ ಸಿಟಿ ಮಂದಿ ದಂಡ ಪ್ರಮಾಣ ಇಳಿಕೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸಿದ್ದಾರೆ.
ಈ ಹಿಂದಿನ ದಂಡದ ಮೊತ್ತಕ್ಕೆ ವಾಹನ ಸವಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇಷ್ಟು ಪ್ರಮಾಣದಲ್ಲಿ ದಂಡವನ್ನ ವಿಧಿಸಿದರೆ ವಾಹನ ಚಾಲನೆ ಮಾಡುವುದಕ್ಕಿಂತ ಸುಮ್ಮನಿರೋದೇ ವಾಸಿ ಎಂಬ ಮಾತುಗಳು ಕೇಳಿಬಂದಿತ್ತು. ಸಂಚಾರಿ ಪೊಲೀಸರು ಹಾಗೂ ವಾಹನ ಸವಾರರ ಮಧ್ಯೆ ಸಂಚಾರಿ ದಂಡದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಿದ್ದವು. ಇದನ್ನೆಲ್ಲ ಮನಗಂಡ ರಾಜ್ಯ ಸರ್ಕಾರ ಕಡೆಗೂ ಸಂಚಾರಿ ದಂಡದ ಮೊತ್ತವನ್ನ ಇಳಿಕೆ ಮಾಡಿ ಆದೇಶ ಹೊರಡಿಸಿದೆ.