ಕರ್ನಾಟಕ

karnataka

ETV Bharat / city

ಬೆಂಗಳೂರು ಲಾಕ್‌ಡೌನ್​.. ಜುಲೈ 21ರ ವರೆಗೆ ಕೆಎಟಿ ಬಂದ್​

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಲಾಕ್‌ಡೌನ್ ಘೋಷಿರುವ ಹಿನ್ನೆಲೆ, ಕಂದಾಯ ಭವನದಲ್ಲಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಜುಲೈ 13ರಿಂದ ಜುಲೈ 21ರ ವರೆಗೆ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿದೆ.

Bangalore Lockdown .. KAT Band until July 21st
ಬೆಂಗಳೂರು ಲಾಕ್‌ಡೌನ್​..ಜುಲೈ 21ರ ವರೆಗೆ ಕೆಎಟಿ ಬಂದ್​

By

Published : Jul 12, 2020, 11:30 PM IST

ಬೆಂಗಳೂರು:ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಲಾಕ್‌ಡೌನ್ ಘೋಷಿರುವ ಹಿನ್ನೆಲೆ, ಕಂದಾಯ ಭವನದಲ್ಲಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಜುಲೈ 13ರಿಂದ ಜುಲೈ 21ರ ವರೆಗೆ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿದೆ.

ಬೆಂಗಳೂರು ಲಾಕ್‌ಡೌನ್​..ಜುಲೈ 21ರ ವರೆಗೆ ಕೆಎಟಿ ಬಂದ್​

ಈ ಸಂಬಂಧ ಕೆಎಟಿ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದು, ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಿದೆ. ಜೊತೆಗೆ ಕೆಎಟಿ ಕಚೇರಿಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್​ ಸಿಬ್ಬಂದಿಯೊಬ್ಬರಿಗೆ ಕೊರೊನಾ ಲಕ್ಷಣ ಕಂಡುಬಂದಿರುವ ಕಾರಣ ನ್ಯಾಯಾಧಿಕರಣವನ್ನು ಮುಚ್ಚಲಾಗುತ್ತದೆ ಎಂದು ಹೇಳಿದೆ. ಜುಲೈ 13ಕ್ಕೆ ವಿಚಾರಣೆಗಾಗಿ ಲಿಸ್ಟ್ ಆಗಿರುವ ಪ್ರಕರಣಗಳನ್ನು ಜುಲೈ 22ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಕೆಎಟಿ ಪ್ರಧಾನ ಪೀಠ‌ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಹೆಡ್ ಕ್ವಾರ್ಟರ್ಸ್​​ನಲ್ಲೇ ಇರುವಂತೆ ಸೂಚಿಸಲಾಗಿದೆ. ಅನುಮತಿ ಇಲ್ಲದೆ, ಹೆಡ್ ಕ್ವಾರ್ಟರ್ಸ್ ಬಿಟ್ಟು ತೆರಳುವಂತಿಲ್ಲ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ನಿಯಮ ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ABOUT THE AUTHOR

...view details