ಕರ್ನಾಟಕ

karnataka

ETV Bharat / city

ಬೆಂಗಳೂರು ಕರಗ ಉತ್ಸವ : ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ - bangalore karaga

ಅದ್ದೂರಿಯಿಂದ ಬೆಂಗಳೂರು ಕರಗ ಉತ್ಸವ ನಡೆಯಲಿದೆ. ಈ ಹಿನ್ನೆಲೆ ವಾಹನ ದಟ್ಟಣೆ ತಪ್ಪಿಸಲು ಕೆಲವೊಂದು ಪರ್ಯಾಯ ಮಾರ್ಗಗಳನ್ನು ವಾಹನ ಸವಾರರಿಗೆ ಸೂಚಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ..

Bangalore Karaga
ಬೆಂಗಳೂರು ಕರಗ

By

Published : Apr 16, 2022, 3:12 PM IST

ಬೆಂಗಳೂರು : ಕೋವಿಡ್ ಕಾರಣದಿಂದ ಎರಡು ವರ್ಷ ಸರಳವಾಗಿ ನಡೆದಿದ್ದ ಐತಿಹಾಸಿಕ ಬೆಂಗಳೂರು ಕರಗ ಮಹಾ ರಥೋತ್ಸವ ಇಂದು ತನ್ನ ಮೊದಲಿನ ವೈಭವಕ್ಕೆ ಮರಳಲಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಲಿರುವ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನದ ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ಸಂಚಾರಿ ಪೊಲೀಸರು ರಥೋತ್ಸವ ನಡೆಯಲಿರುವ ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿನ ಸಂಚಾರ ಮಾರ್ಗಗಳಲ್ಲಿ ಕೆಲ ಬದಲಾವಣೆ ಕೈಗೊಂಡಿದ್ದಾರೆ. ಇಂದು ಸಂಜೆ 4ರಿಂದ ನಾಳೆ ಬೆಳಗ್ಗೆ 8ರವರೆಗೂ ಈ ಕೆಳಕಂಡ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧವಿರಲಿದೆ.

ಎಸ್‌ಜೆಸಿ ರಸ್ತೆ- ಎಸ್‌ಪಿಕೆ ಜಂಕ್ಷನ್- ಎನ್‌ಆರ್‌ ರಸ್ತೆ ಸುಣಕಲ್ಲು ಪೇಟೆಯ ನೇರ ಸಂಚಾರ ಮಾರ್ಗ ಬಂದ್ ಇರಲಿದೆ. ಬದಲಿಗೆ ಎಸ್‌ಜೆಸಿ ರಸ್ತೆಯಿಂದ ಟೌನ್​ಹಾಲ್ ಬಳಿ ಎಡತಿರುವು ಪಡೆದು ಎನ್‌ಆರ್‌ರಸ್ತೆಯಲ್ಲಿ ಸಾಗಲು ಅವಕಾಶ ನೀಡಲಾಗಿದೆ. ಪಿ.ಕೆ.ಲೇನ್, ನಗರ್ತಪೇಟೆ, ಓಟಿಸಿ ರಸ್ತೆ, ಎಸ್.ಪಿ ರಸ್ತೆ, ಸುಣಕಲ್ ಪೇಟೆಯಲ್ಲಿ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿದೆ.

ಟೌನ್​ ಹಾಲ್, ರವೀಂದ್ರ ಕಲಾಕ್ಷೇತ್ರ, ಮೈಶುಗರ್ ಬಿಲ್ಡಿಂಗ್, ಎನ್.ಆರ್.ರಸ್ತೆ ಎಡಭಾಗ, ಕುಂಬಾರ ಗುಂಡಿ ರಸ್ತೆ ಎಡಭಾಗ, ಜೆ.ಸಿ.ರಸ್ತೆ ಎಡಭಾಗ, ಎಸ್.ಪಿ. ರಸ್ತೆ ಎಡಭಾಗದಲ್ಲಿ ಅವಕಾಶವಿರಲಿದೆ.

ಇದನ್ನೂ ಓದಿ:ಹಸಿ ಕರಗ ಉತ್ಸವಕ್ಕೆ ಸಿಎಂ ಮೆರುಗು: ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ABOUT THE AUTHOR

...view details