ಕರ್ನಾಟಕ

karnataka

ETV Bharat / city

ನಟಿ ಚೇತನಾ ರಾಜ್ ಸಾವು: ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ಆರೋಗ್ಯ ಇಲಾಖೆ ನೋಟಿಸ್‌

ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಅನುಮತಿ ಪಡೆದಿರುವುದು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಗೆ ಮಾತ್ರ. ಪಾಲಿಕ್ಲಿನಿಕ್​ಗೆ ಅನುಮತಿ ಪಡೆದವರು ಮೇಜರ್ ಸರ್ಜರಿ ಮಾಡುವಂತಿಲ್ಲ!. ಹಾಗಾಗಿ ಅಪರಾಧ ದೃಢಪಟ್ಟರೆ ಕಾಸ್ಮೆಟಿಕ್‌ ಕೇಂದ್ರಕ್ಕೆ ಬೀಗ ಬೀಳಲಿದೆ.

ಚೇತನಾ ರಾಜ್
ಚೇತನಾ ರಾಜ್

By

Published : May 19, 2022, 10:11 AM IST

ಬೆಂಗಳೂರು: ಕಿರುತೆರೆ ನಟಿ ಚೇತನಾ ರಾಜ್ ಸಾವು ಪ್ರಕರಣ ಸಂಬಂಧ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್‌ಗೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಗೋಳೂರು ನೋಟಿಸ್ ನೀಡಿದ್ದು, ಒಂದು ದಿನದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ. ಒಂದುವೇಳೆ ಉತ್ತರ ನೀಡದಿದ್ದರೆ KPME ಕಾಯ್ದೆ ಪ್ರಕಾರ, ಕ್ರಮಕ್ಕೆ ಶಿಫಾರಸು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ನವರಂಗ್ ಸಿಗ್ನಲ್​ನಲ್ಲಿರುವ ಕಾಸ್ಮೆಟಿಕ್ ಸೆಂಟರ್​ಗೆ ಅಂಟಿಸಿರುವ ನೋಟಿಸ್ ಅನ್ನು ಅಲ್ಲಿನ ಸಿಬ್ಬಂದಿ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಅನುಮತಿ ಪಡೆದಿರುವುದು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಗೆ ಮಾತ್ರ. ಪಾಲಿಕ್ಲಿನಿಕ್​ನಲ್ಲಿ ಕೇವಲ ಎರಡು ಬೆಡ್​ಗೆ ಅವಕಾಶವಿದ್ದು, ಸಣ್ಣಪುಟ್ಟ ಸರ್ಜರಿ ಮಾಡಲು ಮಾತ್ರ ‌ಅನುಮತಿ ಇದೆ. ಲೈಪೊಸಕ್ಷನ್ ಸರ್ಜರಿಗೆ ಅನುಮತಿ ಪಡೆಯದ ಡಾ.‌ಶೆಟ್ಟಿ ಕ್ಲಿನಿಕ್​ನಲ್ಲಿ ಇಬ್ಬರೇ ವೈದ್ಯರಿದ್ದಾರೆ. ಲೈಫೊಸಕ್ಷನ್ ಸರ್ಜರಿ ಮಾಡಲು ಆಪರೇಷನ್ ಥಿಯೇಟರ್, ಐಸಿಯು ಅರವಳಿಕೆ ತಜ್ಞರು ಇರಬೇಕು, ಆದರೆ, ಕಾಸ್ಮೆಟಿಕ್ ಸೆಂಟರ್​ನಲ್ಲಿ ಆಪರೇಷನ್ ಮಾಡಲು ಅನುಮತಿ ಇಲ್ಲ. ಪಾಲಿಕ್ಲಿನಿಕ್​ಗೆ ಅನುಮತಿ ಪಡೆದವರು ಮೇಜರ್ ಸರ್ಜರಿ ಮಾಡುವಂತಿಲ್ಲ.

ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ನೋಟಿಸ್ ನೀಡಿದ ಆರೋಗ್ಯ ಇಲಾಖೆ

ಅನುಮತಿ ಇಲ್ಲದೇ ಆಪರೇಷನ್​ಗೆ ಮುಂದಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇದೀಗ ನೋಟಿಸ್ ನೀಡಿದ್ದು ಅಪರಾಧ ದೃಢಪಟ್ಟರೆ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ಬೀಗ ಬೀಳಲಿದೆ.‌

ಇದನ್ನೂ ಓದಿ:ನಟಿ ಚೇತನಾ ರಾಜ್ ಸಾವು:‌ ಮರಣೋತ್ತರ ಪರೀಕ್ಷೆ ವರದಿ ಬಳಿಕ ಪೊಲೀಸ್ ತನಿಖೆ

ABOUT THE AUTHOR

...view details