ಕರ್ನಾಟಕ

karnataka

ETV Bharat / city

ವಿಶೇಷವಾಗಿ ಸ್ಟಿಚ್ ಮಾಡಿದ ಒಳ ಉಡುಪಿನಲ್ಲಿ ಚಿನ್ನ ಸಾಗಣೆ : 602 ಗ್ರಾಂ ಬಂಗಾರ ಪತ್ತೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನ ಕಸ್ಟಮ್ಸ್ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ ಡಿಸೈನ್​ ಮಾಡಿದ್ದ ಪ್ಯಾಂಟ್ ಮತ್ತು ಒಳಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

illegal-gold-transport
ಚಿನ್ನ ಸಾಗಾಟ

By

Published : Dec 12, 2021, 8:54 AM IST

Updated : Dec 12, 2021, 9:22 AM IST

ದೇವನಹಳ್ಳಿ : ವಿಶೇಷವಾಗಿ ಹೊಲಿದ ಪ್ಯಾಂಟ್ ಮತ್ತು ಒಳ ಉಡುಪಿನೊಳಗೆ ಚಿನ್ನ ಇಟ್ಟು ಅಕ್ರಮ ಸಾಗಣಿಕೆ ಮಾಡುತ್ತಿದ್ದ ಜಾಲವನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆರೋಪಿಗಳಿಂದ 602 ಗ್ರಾಂ ಪೇಸ್ಟ್ ರೂಪದ ಚಿನ್ನವನ್ನ ಜಪ್ತಿ ಮಾಡಲಾಗಿದೆ.

ಶಾರ್ಜಾದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನ ಕಸ್ಟಮ್ಸ್ ಸಿಬ್ಬಂದಿ ತಪಾಸಣೆ ನಡಿಸಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ ಡಿಸೈನ್​ ಮಾಡಿದ್ದ ಪ್ಯಾಂಟ್ ಮತ್ತು ಒಳ ಉಡುಪನ್ನ ಧರಿಸಿದ ವ್ಯಕ್ತಿ ಅದರೊಳಗೆ ಪೇಸ್ಟ್ ರೂಪದ ಚಿನ್ನವನ್ನ ಮರೆಮಾಚಿ ಇಟ್ಟಿದ್ದು, ಪತ್ತೆಯಾಗಿತ್ತು.

ಸದ್ಯ ಪ್ರಯಾಣಿಕನನ್ನ ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, 30 ಲಕ್ಷ ರೂ. ಮೌಲ್ಯದ 602 ಗ್ರಾಂ ತೂಕದ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ.

Last Updated : Dec 12, 2021, 9:22 AM IST

ABOUT THE AUTHOR

...view details